
ಹುಬ್ಬಳ್ಳಿ Breaking
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಬೆಳಂಬೆಳಗ್ಗೆ ಪೊಲೀಸರ ಗುಂಡಿನ ಸದ್ದು ಕೇಳಿ ಬಂದಿದೆ. ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ ನಟೋರಿಯಸ್ ದರೋಡೆಕೋರ, ಕಳ್ಳತನ ಆರೋಪಿ ಕಾಲಿಗೆ ಗುಂಡು ಹಾಕಿದ ಘಟನೆ ನಗರದ ಎಂಟಿಎಸ್ ಕಾಲೋನಿಯಲ್ಲಿ ನಡೆದಿದೆ.
ನಟೋರಿಯಸ್ ದರೋಡೆಕೋರ ಅರುಣ್ ಅಲಿಯಾಸ್ ಸೋನು ರಾಜು ನಾಯಕ್ ಎಂಬಾತನೇ ಗುಂಡು ತಿಂದ ಕಳ್ಳನಾಗಿದ್ದಾನೆ.
ಸೋನು ನಾಯಕ್ ಹುಬ್ಬಳ್ಳಿಯ ನೇಕಾರ ನಗರ ನಿವಾಸಿಯಾಗಿದ್ದಾನೆ. ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿ ತಪ್ಪಿಸಿಕೊಳ್ಳೋ ವೇಳೆ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ.
ಈ ವೇಳೆ ಉಪನಗರ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ತರುಣ್ ಹಾಗೂ ಧೀರು ಪಮ್ಮಾರ್ ಗೆ ಗಾಯಗಳಾಗಿದ್ದು, ಇಬ್ಬರು ಪೊಲೀಸ್ ಸಿಬ್ಬಂದಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈತ 12 ಕಳ್ಳತನ ಹಾಗೂ ವೈಶ್ಯವಾಟಿಕೆ ದಂಧೆಯಲ್ಲಿ ಭಾಗಿಯಾಗಿದ್ದ ವೃತ್ತಿಯಲ್ಲಿ ಆಟೋಚಾಲಕ, ಪ್ರವೃತ್ತಿಯಲ್ಲಿ ಕಳ್ಳನಾಗಿದ್ದು, ಸದ್ಯ ಈತನನ್ನು ಕೂಡ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.