January 13, 2025

ಪಬ್ಲಿಕ್ ರೈಡ್ ನ್ಯೂಸ್ ನೆಲಮಂಗಲ:ಹಿಂದುಳಿದ ಸಮುದಾಯಕ್ಕಾಗಿ ಮೀಸಲಿರುವ ಸೌಲಭ್ಯಗಳನ್ನು ಆರ್ಹ ಫಲಾನುಭವಿಗಳು ಸದುಪಯೋಗಪಡಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕೆಂದು ಶಾಸಕ ಎನ್.ಶ್ರೀನಿವಾಸ್ ಹೇಳಿದರು.

ನಗರದ ಶ್ರೀಜಯದೇವ ವೀರಶೈವ ಕನ್ವೆನ್ಷನ್ ಹಾಲ್‌ನಲ್ಲಿ ನಗರಸಭೆಯಿಂದ ಆಯೋಜಿಸಿದ್ದ ವಿವಿಧ ಸವಲತ್ತು ಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಲ್ಪಟ್ಟ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅನುಸೂಚಿತ ಜಾತಿ ಮತ್ತು ಜಾನಾಂಗಕ್ಕೆ ಸೇರಿದ ಹಾಗೂ ಇತರೆ ಹಿಂದುಳಿದ ಸಮುದಾಯಕ್ಕಾಗಿ ಮೀಸಲಿರುವ ಎಸ್‌ಸಿಪಿ ಮತ್ತು ಟಿಎಸ್‌ಪಿ ಅನುದಾನವನ್ನು ಮೀಸಲಿರಿಸಿದೆ. ಸ್ಥಳೀಯ ನಗರಸಭೆಯಲ್ಲೂ ಅನುದಾನವನ್ನು ಮೀಸಲಿರಿಸಿರುವ ಹಣದಲ್ಲಿ ವಿವಿಧ ಸವಲತ್ತುಗಳನ್ನು ವಿತರಣೆ ಮಾಡುತ್ತಿದ್ದು ಅರ್ಥಿಕವಾಗಿ ಸಬಲರಾಗುವ ಕಾರ್ಯಕ್ಕೆ ಒತ್ತು ನೀಡಲಾಗುತ್ತಿದೆ. ಫಲಾನುಭವಿಗಳು ಬದುಕನ್ನು ಕಟ್ಟಿಕೊಳ್ಳುವುದರತ್ತ ಗಮನವಿರಿಸಿಕೊಳ್ಳುವ ಮೂಲಕ ಸುಖೀ ಜೀವನಕ್ಕೆ ಮುಂದಾಗಬೇಕೆಂದು ಅವರು ಅಂಗವಿಕಲರಿಗೆ ಬೈಕ್ ವಿತರಣೆ ನೆರವೇರಿಸಿದರು.

ನಗರಸಭೆ ಪ್ರಭಾರ ಅಧ್ಯಕ್ಷೆ ಸುಜಾತಮುನಿಯಪ್ಪ ಮಾತನಾಡಿ ಸರ್ಕಾರದ ಯೋಜನೆಗಳು ಪ್ರತಿಯೊಬ್ಬರಿಗೂ ತಲುಪಿಸುವ ನಿಟ್ಟಿನಲ್ಲಿ ಅಧಿಕಾರಿಗಳು ನಿತ್ಯ ಶ್ರಮಿಸುತ್ತಿದ್ದು ನಗರಸಭೆಯಿಂದ ನೀಡಿರುವ ವಿವಿಧ ಸೌಲಭ್ಯಗಳು ಮಹಿಳೆಯರನ್ನು ಸ್ವಾವಲಂಬನೆಯಾಗಿ ಬದುಕಲು ಸಹಕಾರಿಯಾಗಬಲ್ಲದು ಎಂದ ಅವರು ನಗರಸಭೆ ವ್ಯಾಪ್ತಿಯಲ್ಲಿ 170ಯುಪಿಎಸ್‌ಯಂತ್ರ, ಪದವಿ ವ್ಯಾಸಾಂಗ ಮಾಡುತ್ತಿರುವ 13 ವಿದ್ಯಾರ್ಥಿಗಳಿಗೆ ಲ್ಯಾಪ್‌ಟ್ಯಾಪ್, ಮಹಿಳೆಯರಿಗೆ 150 ಹೊಲಿಗೆ ಯಂತ್ರ ಸೇರಿದಂತೆ 17 ಮಂದಿ ಅಂಗವಿಕಲರಿಗೆ ಬೈಕ್ ವಿತರಣೆ ಮಾಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ನೆ.ಯೋ.ಪ್ರಾ ಅಧ್ಯಕ್ಷ ಎಂ.ನಾರಾಯಣ್‌ಗೌಡ, ನಗರಸಭೆ ಸ್ಥಾಯಿ ಸಮಿತಿ ಅದ್ಯಕ್ಷ ಸುನೀಲ್‌ಮೂಡ್, ಸದಸ್ಯ ಎನ್.ಗಣೇಶ್, ಕೆ.ಎಂ.ಶಿವಕುಮಾರ್, ಸಿ.ಪ್ರದೀಪ್, ನರಸಿಂಹಮೂರ್ತಿ, ಆನಂದ್, ಅಂಜಿನಪ್ಪ, ಪದ್ಮನಾಭ್, ಚೇತನ್, ಪುರುಷೋತ್ತಮ್, ಲತಾಹೇಮಂತ್‌ಕುಮಾರ್, ಪೂರ್ಣಿಮಾಸುಗ್ಗರಾಜು, ಪುಷ್ಪಲತಾಮಾರೇಗೌಡ, ಲೋಲಾಕ್ಷಿಗಂಗಾಧರ್, ಭಾರತಿಬಾಯಿ, ಹೆಚ್ಚುವರಿ ಸದಸ್ಯ ಕೃಪಾನಂದ್, ಮುನಿರಾಜು, ರಾಮಮೂರ್ತಿ, ಪೌರಾಯುಕ್ತ ಮನುಕುಮಾರ್ ಸೇರಿದಂತೆ ಹಲವರಿದ್ದರು.

ವಿಕಾಸ್ ನೆಲಮಂಗಲ ವರದಿಗಾರರು

Leave a Reply

Your email address will not be published. Required fields are marked *

error: Content is protected !!