
ಸಂಕೇಶ್ವರದ ಎಸ್ ಡಿ ವಿ ಎಸ್ ಸಂಘದಲ್ಲಿ ವಿನೂತನವಾಗಿ ಭವಿಷ್ಯದ ಹಿತದೃಷ್ಟಿಯಿಂದ ಪರಿಸರ ಪ್ರಜ್ಞೆ ಮತ್ತು ಭವಿಷ್ಯದ ಚಿಂತನೆ ವಿಚಾರಗೋಷ್ಠಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಎಸ್ ಎಸ್ ಆರ್ಟ್ಸ್ಕ ಸೈನ್ಸ್ ಇನ್ಸ್ಟಿಟ್ಯೂಟ್ ಹಾಗೂ ಎಲ್‌ಕೆ ಕೋರ್ಟ್ ವಾಣಿಜ್ಯ ಮಹಾವಿದ್ಯಾಲಯದ ಸಯುಕ್ತ ಆಶಯದಲ್ಲಿ ನಡೆದ ಈ ಕಾರ್ಯಕ್ರಮ ಎಸ್‌ಡಿವಿಎಸ್ ಸಂಘದ ಕಾರ್ಯಾಧ್ಯಕ್ಷ ಮಾಜಿ ಸಚಿವ ಎ ಬಿ ಪಾಟೀಲ್ ಅಂತರಾಷ್ಟ್ರೀಯ ಅರಣ್ಯ ಕೃಷಿ ವಿಜ್ಞಾನಿ ಚಂದ್ರಶೇಖರ್ ಬಿರಾದಾರ್ ಹಾಗೂ ವಿಶ್ರಾಂತ ಕುಲಪತಿ ಡಾಕ್ಟರ್ ಎಸ್ ಬಿ ದಂಡಿನ್ ಶಶಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಇದೇ ವೇಳೆ ಮಾಜಿ ಸಚಿವ ಹಿರಿಯ ರಾಜಕಾರಣಿ ಎ ಬಿ ಪಾಟೀಲ್ ಹಾಗೂ ಮುಖ್ಯ ಅತಿಥಿಗಳು ಮಾತನಾಡಿ ಪರಿಸರವನ್ನು ನಿರ್ಲಕ್ಷಿಸುವುದರಿಂದ ನಮ್ಮ ವಿನಾಶಕ್ಕೆ ನಾವೇ ಕಾರಣರಾಗುತ್ತಿದ್ದೇವೆ.
ಪ್ರಾಣಿ ಪಕ್ಷಿ ಗಿಡ ಮರಗಳರಕ್ಷಿಸ್ ಸುವ ಹೊಣೆ ನಮ್ಮದಾಗಬೇಕು ಮಕ್ಕಳಲ್ಲಿ ಜಾಗೃತಿ ಮೂಡಿಸುವ ಮೂಲಕ ಪ್ರತಿಯೊಬ್ಬರು ಪರಿಸರ ಪ್ರೀತಿ ಕಾಳಜಿ ಬೆಳೆಸಿಕೊಳ್ಳಬೇಕು ಮುಖ್ಯವಾಗಿ ಅದರಲ್ಲೂ ಭವಿಷ್ಯದ ರೂವಾರಿಗಳಾದ ಮಕ್ಕಳಲ್ಲಿ ಪರಿಸರ ಪ್ರಜ್ಞೆ ಜಾಗೃತಿಗೊಳಿಸುವುದು ಅತಿ ಅವಶ್ಯಕವಾಗಿದೆ ಎಲ್ಲ ರೀತಿಯ ಜ್ಞಾನ ಹೊಂದಿರುವ ಮಾನವರಿಂದಲೇ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮವಾಗುತ್ತಿದೆ ಇನ್ನಾದರೂ ಭವಿಷ್ಯದ ಹಿತದೃಷ್ಟಿಯಿಂದ ಮಕ್ಕಳಲ್ಲಿ ಜಾಗೃತಿ ಮೂಡಿಸುವ ಮೂಲಕ ಪರಿಸರ ಸಂರಕ್ಷಿಸುವ ಹೊಣೆ ನಮ್ಮದಾಗಿದೆ ಮಾನವನು ಸಮಾಜ ಜೀವಿ ಎನ್ನುವ ಹಾಗೆ ಆತನು ಪರಿಸರ ಅಥವಾ ಪ್ರಕೃತಿಯ ನಿಸರ್ಗದ ಕೂಸು ಅವನ ಸುತ್ತಮುತ್ತಲು ವೈವಿಧ್ಯಮಯವಾದ ನಿಸರ್ಗದ ಸೊಬಗು ಇದೆ ಅಂದರೆ ಆತನ ಸುತ್ತಮುತ್ತ ನಿನ್ನ ಹಲವಾರು ಮರ ಗಿಡಗಳಿವೆ ವಿವಿಧ ಪ್ರಕಾರ ರ ಪ್ರಾಣಿ ಪಕ್ಷಿಗಳಿವೆ ಅಲ್ಲದೆ ವೈವಿಧ್ಯಮಯವಾದ ಕೀಟ ಪ್ರಪಂಚವಿದೆ ಈ ಜೀವಿಗಳು ಅಲ್ಲದೆ ಹಲವಾರು ಮಹಾನದಿ ಸಾಗರ ಸರೋವರಗಳಿವೆ, ದೊಡ್ಡ ದೊಡ್ಡ ಪರ್ವತ ಶಿಖರಗಳಿವೆ ಗಾಳಿ ಬೆಳಕು ಹಾಗೂ ಖನಿಜ ಸಂಪತ್ತನ್ನು ಒಳಗೊಂಡ ಪ್ರಕೃತಿ ಮಾತೆ ಇದ್ದಾಳೆ ಎಂದು ಹೇಳಿದರು.
ಪೂಜಾರ್ ಸರ್ ಸಂತೋಷ್ ತೆರ್ನಿಮಟ್ ಸೇರಿದಂತೆ ಶ್ರೀ ದುರದುಂಡೇಶ್ವರ ವಿದ್ಯಾ ವರ್ಧಕ ಸಂಘದ ಉಪಾಧ್ಯಕ್ಷರು ವ್ಯವಸ್ಥಾಪಕ ಸಮಿತಿಯ ಸದಸ್ಯರು ಸಂಘ ಸಂಸ್ಥೆಗಳ ಮುಖ್ಯಸ್ಥರು ಸಿಬ್ಬಂದಿ ಹಾಗೂ ವಿದ್ಯಾರ್ಥಿ ವೃಂದ ಪಾಲ್ಗೊಂಡಿದ್ದರು.
*ಸಂತೋಷ್ ನಿರ್ಮಲೆ ಜೊತೆ*
*ರಾಮಗೌಡ ಪಾಟೀಲ್ ಸಂಕೇಶ್ವರ*