
ಪಬ್ಲಿಕ್ ರೈಡ್ ಪೀಣ್ಯ ದಾಸರಹಳ್ಳಿ :ಸಹಾಯ ಹಸ್ತ ಸೇವಾ ಟ್ರಸ್ಟ್ ನ ಅಧ್ಯಕ್ಷ ರುದ್ರೇಗೌಡರವರ ಹುಟ್ಟುಹಬ್ಬ ಪ್ರಯುಕ್ತ ಉಚಿತ ಆರೋಗ್ಯ ತಪಾಸಣಾ ಶಿಬಿರ ವನ್ನು ಹಮ್ಮಿಕೊಂಡು ಇದರ ಜೊತೆಗೆ ಕಣ್ಣಿನ ತಪಾಸಣೆ ಅವಶ್ಯಕತೆ ಇರುವಂತವರಿಗೆ ಶಸ್ತ್ರ ಚಿಕಿತ್ಸೆ ಹಾಗೂ ಕನ್ನಡಕ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಆರೋಗ್ಯ ಶಿಬಿರದಲ್ಲಿ ಭಾಗವಹಿಸಿ ಕಣ್ಣಿನ ಪರೀಕ್ಷೆಗೆ ಒಳಪಟ್ಟು 300ಕ್ಕೂ ಹೆಚ್ಚು ಜನರಿಗೆ ಕನ್ನಡಕ ವಿತರಣೆಯನ್ನು ರಾಜಗೋಪಾಲನಗರ ವಾರ್ಡಿನ ರಾಜರಾಜೇಶ್ವರಿ ದೇವಸ್ಥಾನ ಫ್ರೆಂಡ್ ಸರ್ಕಲ್ ಆಯೋಜಿಸಿ ಕನ್ನಡಕವನ್ನು ವಿತರಣೆ ಮಾಡಲಾಯಿತು ಈ ವೇಳೆ ಸಹಾಯ ಹಸ್ತ ಸೇವಾ ಟ್ರಸ್ಟ್ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ರುದ್ರಗೌಡರು ಮಾತನಾಡಿ ನನ್ನ ಜನ್ಮದಿನದ ಪ್ರಯುಕ್ತ ನೂರಾರು ವಿದ್ಯಾರ್ಥಿಗಳಿಗೆ ಪ್ರತಿಭ ಪುರಸ್ಕಾರದ ಜೊತೆಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಂಡು ನುರಿತ ತಜ್ಞ ವೈದ್ಯರಿಂದ ವಿವಿಧ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಎಲ್ಲರೂ ಬಂದು ಆರೋಗ್ಯ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಔಷಧಿಯನ್ನು ಪಡೆದು ಗುಣಮುಖರಾಗಿದ್ದಾರೆ ಅದೇ ರೀತಿ ಕೆಲವರಿಗೆ ತಪಾಸಣೆ ವೇಳೆ ಶಸ್ತ್ರ ಚಿಕಿತ್ಸೆ ಅವಶ್ಯಕತೆ ಇರುವಂತಹ ರೋಗಿಗಳಿಗೆ ಶಸ್ತ್ರ ಚಿಕಿತ್ಸೆ ಮಾಡಿಸಲಾಗಿದೆ ಎಂದು ತಿಳಿಸಿ , ಈ ದಿನ ಕಣ್ಣಿನ ತಪಾಸಣೆಯಲ್ಲಿ ಪಾಲ್ಗೊಂಡ ಸುಮಾರು 300ಕ್ಕೂ ಹೆಚ್ಚು ಜನರಿಗೆ ಕನ್ನಡಕಗಳನ್ನು ವಿತರಣೆ ಮಾಡಲಾಯಿತು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹನುಮಂತರಾಜು ಮೋಹನ್ ಆರ್ಕೇಶ್, ಗೋವಿಂದರಾಜು, ಜಯಣ್ಣ, ಜಿ.ಎಸ್ ಕೃಷ್ಣಮೂರ್ತಿ, ವೆಂಕಟೇಶ್, ಉಮೇಶ್, ಸೌಭಾಗ್ಯ, ಉಮೇಶ್, ಶ್ರೀಧರ್, ರೇಣುಕಾಪ್ರಸಾದ್, ಜಗದೀಶ್, ಶ್ರೀಧರ್, ಸೌಮ್ಯಾ, ಸದಸ್ಯರು ಸೇರಿದಂತೆ ಹಲವಾರು ಮುಖಂಡರು, ಮಹಿಳೆಯರು, , ಸಮಸ್ತ ನಾಗರಿಕ ಬಂಧು ಭಗನಿಯರು ಇದ್ದರು.