
ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ,ದಾಸರಹಳ್ಳಿ: ಜವಳಿ ಸಚಿವಾಲಯ ಹಾಗೂ ನೇಕಾರರ ಸೇವಾ ಕೇಂದ್ರ ಬೆಂಗಳೂರು ವತಿಯಿಂದ 10 ನೇ ರಾಷ್ಟ್ರೀಯ ಕೈಮಗ್ಗ ದಿನದ ಅಂಗವಾಗಿ ರಾಜಾಜಿನಗರದ ಕೆಎಲ್ಇ ಸೊಸೈಟಿಯ ಎಸ್ ನಿಜಲಿಂಗಪ್ಪ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕೈಮಗ್ಗದ ಬಗ್ಗೆ ಕಾಲೇಜು ಮಟ್ಟದ ಜಾಗೃತಿ ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜವಳಿ ಅಭಿವೃದ್ಧಿ ಆಯುಕ್ತರು ಹಾಗೂ ಕೈಮಗ್ಗ ಮತ್ತು ಜವಳಿ ನಿರ್ದೇಶಕರಾದ ಕೆ ಜ್ಯೋತಿ ಐಎಎಸ್ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಡಾ ಎಸ್.ಎಂ ಮಂತಿರ ಮೂರ್ತಿ, ಆರ್ ಶಿವಕುಮಾರ್, ಡಾ. ಜೆ.ಎಂ ಮಲ್ಲಿಕಾರ್ಜುನಯ್ಯ, ಡಾ. ಅರುಣ್ ಕುಮಾರ್ ಬಿ ಸೊನ್ನಪ್ಪನವರ್, ಡಾ. ಹೇಮಲತಾ ಜೈನ್ ಸೇರಿದಂತೆ ಹಲವಾರು ಗಣ್ಯರು, ನೇಕಾರರ ಸೇವಾ ಕೇಂದ್ರದವರು ಉಪಸ್ಥಿತರಿದ್ದರು.