
ಪಬ್ಲಿಕ್ ರೈಡ್ ನ್ಯೂಸ್ ಬೆಂಗಳೂರು ಉತ್ತರ: ವಿವಿಧ ಯೋಜನೆ ಅನುಷ್ಠಾನ ವರದಿ ಹಾಗೂ 15ನೇ ಹಣಕಾಸು ಯೋಜನೆ ಅಡಿಯಲ್ಲಿ ಪಂಚಾಯಿತಿ ಕ್ರಿಯಾ ಯೋಜನೆಗಳ ಪಟ್ಟಿಗಳ ವರದಿ ಆಯೋಜಿಸಿ ಮತ್ತು ಆವಾ ಆಯೋಗ ಮಂಡನೆ ಮೂಲಕ ಬೆಂಗಳೂರು ಉತ್ತರ ತಾಲೂಕು ಕೊಡಿಗೆಹಳ್ಳಿ ಗ್ರಾಮ ಪಂಚಾಯಿತಿಯ ಗ್ರಾಮ ಸಭೆ ಯಶಸ್ವಿಯಾಗಿ ನೆರವೇರಿತು. ಮೊದಲ ಸುತ್ತಿನ ಗ್ರಾಮ ಸಭೆ ಅಧ್ಯಕ್ಷತೆಯಲ್ಲಿ ಶ್ರೀಮತಿ ವಿನೋದ ನರಸಿಂಹಮೂರ್ತಿ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ವರದಿ ಮಂಡನೆ. ಕರವಸಲಿಗಾರ ರಮೇಶ್. ಸಾರ್ವಜನಿಕರಲ್ಲಿ ತಿಳಿಯಪಡಿಸಿದರು ಹಲವು ಸರ್ಕಾರಿ ಯೋಜನೆಗಳ ಸಂಬಂಧಪಟ್ಟಂತೆ ಹಾಗೂ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸ ಮೂಲಕ ಚರ್ಚೆ ನಡೆಸಲಾಯಿತು ಒಟ್ಟಿನಲ್ಲಿ ಸ್ಥಳೀಯ ಪಂಚಾಯಿತಿಗೆ ಸಂಬಂಧಪಟ್ಟ ಹವಾಲುಗಳನ್ನು ಸ್ವೀಕರಿಸಿ ಶೀಘ್ರದಲ್ಲೇ ಭರವಸೆಯನ್ನು ಪರಿಹರಿಸಲಾಗುವುದು ಎಂದು ಹೇಳಿದರು. ಗ್ರಾಮ ಪಂಚಾಯತಿ ಅಧ್ಯಕ್ಷರಾದ ವಿನೋದ ಪಿ ನರಸಿಂಹಮೂರ್ತಿ, ಉಪಾಧ್ಯಕ್ಷೆ ಭಾಗ್ಯವತಿ ಎಂ ಮುನಿಯಪ್ಪ, ಸಂದರ್ಭದಲ್ಲಿ ಪಂಚಾಯಿತಿ ಸದಸ್ಯರುಗಳಾದ, ಗಂಗರಾಜಮ್ಮ ಪ್ರಕಾಶ್ ಮೂರ್ತಿ, ಪುರುಷೋತ್ತಮ್, ಪುಷ್ಪಲತಾ ಪುಟ್ಟರಾಜು, ಶಿಲ್ಪ ರೇಣುಕಪ್ಪ,ಚಿಕ್ಕ ಕೊಡಿಗೆಹಳ್ಳಿ ನಾಗರಾಜು, ಸುರೇಶ್, ಸಾಕಮ್ಮ ಬೈರಪ್ಪ, ಲೋಕದೇವಿ ನಾಗರಾಜು, ಸಾವಿತ್ರಿ ಸದಾನಂದ, ಕೋಮಲ ಸೋಮಶೇಖರ್, ಉಮಾದೇವಿ ಗಾಳಪ್ಪ, ನಂದನ ಮಹೇಶ್, ಹಾಗೂ ಸರ್ವ ಸದಸ್ಯರು. ಮತ್ತು ಕೊಡಿಗೆಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎನ್ ಭಾಗೀರಥಿ, ಕಾರ್ಯದರ್ಶಿ ಪ್ರವೀಣ್ ಕುಮಾರ್, ಸರ್ವ ಸಿಬ್ಬಂದಿಗಳು ಹಾಜರಿದ್ದರು.