
ಬೆಂಗಳೂರು
ಕರ್ನಾಟಕ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘವು ದಿನಾಂಕ 19.07.2024 ರಂದು ತಾಲೂಕ ಹಾಗು ಜಿಲ್ಲಾ ಮಟ್ಟದ ಪದಾಧಿಕಾರಿಗಳ ಜೊತೆ ಪತ್ರಿಕೋದ್ಯಮ ಕಾರ್ಯಗಾರ ಏರ್ಪಡಿಸಿ ಕೊಂಡಿತ್ತು ಶ್ರೀಮತಿ ಶೈಲಜಾ ಮುರಳೀಧರ್ ರವರ ಪ್ರಾರ್ಥನಾ ಗೀತೆ ಯೊಂದಿಗೆ ಕಾರ್ಯಕ್ರಮ ಕೇಂದ್ರ ಕಚೇರಿಯಲ್ಲಿ ಆರಂಭವಾಯಿತು,ಸಂಘದ ಅನೇಕ ದಿವಂಗತ ಪತ್ರಕರ್ತರಿಗೆ ಎದ್ದು ನಿಂತು ಮೌನ ಆಚರಣೆ ಮಾಡಲಾಯಿತು ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷ ಎಂ. ಟಿಪ್ಪುವರ್ಧನ್ ರಾಜ್ಯ ಪದಾಧಿಕಾರಿಗಳಾದ ಶ್ರೀಮತಿ ಸರೋಜಿನಿ ಅರಗೆ , ರಾಜ್ಯಮಾಜಿ ಜಂಟಿ ಕಾರ್ಯದರ್ಶಿ ಶ್ರೀಆನಂದ್, ರಾಜ್ಯ ಸಂಘಟನಾ ಕಾರ್ಯದರ್ಶಿ ಶ್ರೀಎಂ.ದೇವರಾಜು ರಾಜ್ಯಸಹಕಾರ್ಯದರ್ಶಿ ಜೆ.ಡಿ.ಸತೀಶ್, ಉಪಸ್ಥಿತರಿದ್ದರು .ಕಾರ್ಯಕ್ರಮವನ್ನು ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷ ಕೆ. ವಿ. ಅನಿಲ್ ಕುಮಾರ ರವರ ಪದಾಧಿಕಾರಿಗಳು ಆಯೋಜಿಸಿದ್ದರು ಈ ಕಾರ್ಯಗಾರ ವನ್ನು ಉದ್ದೇಶಿಸಿ ವಿವಿದ ಜಿಲ್ಲೆಯ ಅಧ್ಯಕ್ಷ ರು ಹಾಗು ಅವರವರ ಪದಾಧಿಕಾರಿಗಳು ಮುಕ್ತ ಮನಸಿನಿಂದ ಮಾತಾಡಿದರು ಅವರಲ್ಲಿ ಪ್ರಮುಖವಾಗಿ ಬೆಂಗಳೂರು ಜಿಲ್ಲಾ ಮಾಜಿ ಅಧ್ಯಕ್ಷ ಎಂ. ರಾಜ ಶೇಖರ್, ಬೆಳಗಾವಿ ಜಿಲ್ಲಾ ಗೌರವ ಅಧ್ಯಕ್ಷ ಶ್ರೀ ರಾಮನಗೌಡ ಪಾಟೀಲ್ , ಹುಕ್ಕೇರಿ ಯ ಶ್ರೀಕಾಂತ ಚೌಗಳ,ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಹೆಚ್ಚ. ಎಸ್.ವೆಂಕಟೇಶ್, ಜನಪರ ಮಂಜು, ಹುಕ್ಕೇರಿ ಅಧ್ಯಕ್ಷರಾದ ಸಂಜೀವ್ ಕಟ್ಟಿಮನಿ, ಸಂತೋಷ್,ಎಸ್,ನಿರ್ಮಲೇ, ಬೆಳಗಾಂ ಜಿಲ್ಲಾ ಅಧ್ಯಕ್ಷರಾದ ರಾಮಣ್ಣ.ಎಂ ಈಟಿ, ರಾಯಚೂರು ಜಿಲ್ಲೆ ಸುನೂ ಮೀಡಿಯ ಸಿ. ಈ. ಓ ಕೆ. ಭೀಮಣ್ಣ, ಕೊಂಡಲ್, ಹಾಗು ಸದಸ್ಯರು ಗಳಾದ ಜಾನ್ ಸಾಮುವೆಲ್, ಸಿದ್ದರಾಮಯ್ಯ, ಬಡವರ ಶಕ್ತಿ ಸಿದ್ದಪ್ಪ, ಶಬೀರ್ ಅಹಮದ್, ಡಿ. ಕೆ.ಉಮೇಶ್, ಎಂ.ಚನ್ನಿಗಾಯಪ್ಪ, ಎಲ್ .ಲಕ್ಷ್ಮೀ ನಾರಾಯಣ್, ಬೆಂಗಳೂರು ನಗರ ಜಿಲ್ಲಾ ನೂತನ ಸಹ ಕಾರ್ಯದರ್ಶಿ ಜಿ.ಶ್ರೀನಿವಾಸ್, ಪೀ.ಆಂಥೋನಿ, ಶ್ರೀಧರ ಹೆಗಡೆ, ಬನಹಟ್ಟಿ ತಾಲ್ಲೂಕಿನ ಎ.ಬಂದೇನವಾಜ್, ಡಿ. ಸಿ. ಚೌಡರಾಜ್ ಹಾಗು ಇನ್ನಿತರ ಹಲವಾರು ಜನ ಗೌರವಾನ್ವಿತ ಸದಸ್ಯರು ಗಂಭೀರವಾಗಿ ಮಾತನಾಡಿ ಸಭೆಗೆ ಶೋಭೆ ತಂದರು.
ಇದೆ ಸಂಧರ್ಭದಲ್ಲಿ ಊಟದ ಬಳಿಕ ಪತ್ರಕರ್ತರ ಆರೋಗ್ಯದ ಕುರಿತು ವೈದ್ಯರಾದ ಶ್ರೀಮತಿ ಡಾ.ಸುಭಾಷಿಣಿಯವರು ಆಯುರ್ ವೇದದ ಬಗ್ಗೆ ತಿಳಿಸುತ್ತಾ ಅರೋಗ್ಯ ಮನುಷ್ಯನ ಒತ್ತಡದ ಬದುಕಿಗೆ ಅತ್ಯಾವಶ್ಯಕ ಎಂದು ಮಾತನಾಡಿ ಆಯುರ್ವೇದವು ಎಷ್ಟೊಂದು ಅಮೂಲ್ಯ ಎಂದು ತಿಳಿಸಿದ್ದು ವಿಶೇಷವಾಗಿತ್ತು ನಂತರ ಸಂಜೆ ಕೇಂದ್ರ ಸಮಿತಿ ಯ ಪದಾಧಿಕಾರಿಗಳೆಲ್ಲರು ಆಗಮಿಸಿದ್ದ ತಾಲುಕು, ಜಿಲ್ಲಾ ಪದಾಧಿಕಾರಿಗಳಿಗೆ ಕಾರ್ಯಗಾರ ಪ್ರಮಾಣ ಪತ್ರ ಗಳನ್ನು ನೀಡಿ ಬೀಳ್ಕೊಡಲಾಯಿತು.