
ಹುಬ್ಬಳ್ಳಿ
ಚಾಲಕನ ನಿಯಂತ್ರಣ ತಪ್ಪಿದ ಸರ್ಕಾರಿ ಸಾರಿಗೆ ಬಸ್ಸವೊಂದು ಮರ ಡಿಕ್ಕಿ ಹೊಡೆದ ಪರಿಣಾಮ ಬಸ್ಸ ಚಾಲಕನಿಗೂ ಸೇರಿ ನಾಲ್ಕು ಜನ ಪ್ರಯಾಣಿಕರಿಗೆ ಗಂಭೀರವಾದ ಗಾಯವಾಗಿರುವ ಘಟನೆ ಕಲಘಟಗಿ ತಾಲೂಕಿನ ರಾಮನಾಳ ಕ್ರಾಸ್ ಬಳಿ ಇಂದು ನಡೆದಿದೆ. ಹುಬ್ಬಳ್ಳಿಯಿಂದ ಕುಮಟಾಗೆ ಸರ್ಕಾರಿ ಬಸ್ಸ 30ಕ್ಕೂ ಹೆಚ್ಚು ಪ್ರಯಾಣಿಕರನ್ನು ಕರೆದುಕೊಂಡು ಸಾಗುತಿತ್ತು. ಹುಬ್ಬಳ್ಳಿಯ ಕಲಘಟಗಿ ಮಾರ್ಗವಾಗಿ ತೆರಳುತಿದ್ದ ಸಂದರ್ಭದಲ್ಲಿ, ರಾಮನಾಳ ಕ್ರಾಸ್ ಬಳಿ ಬಸ್ಸ ಚಾಲಕನ ನಿಯಂತ್ರಣ ತಪ್ಪಿದೆ.
ಕೂಡಲೇ ಎಚ್ಚೆತ್ತುಕೊಂಡ ಬಸ್ಸ ಚಾಲಕ ದೊಡ್ಡ ಅನಾಹುತ ತಪ್ಪಿಸಲು ಮರಕ್ಕೆ ಡಿಕ್ಕಿ ಹೊಡೆಸಿ, ಬಾರಿ ಅನಾಹುತ ತಪ್ಪಿಸಿದ್ದಾರೆ. ಘಟನೆಯಲ್ಲಿ ಸಾರಿಗೆ ಬಸ್ಸ ಚಾಲಕನ ಎರಡು ಕಾಲಿಗೂ ಗಂಭಿರ ಗಾಯವಾಗಿದ್ದು, ನಾಲ್ಕು ಜನ ಪ್ರಯಾಣಿಕರಿಗೆ ಗಂಭಿರ ಗಾಯವಾಗಿವೆ. ಕೂಡಲೇ ಸ್ಥಳಿಯರ ಸಹಕಾರದಿಂದ ಗಾಯಾಳುಗಳನ್ನು ಹುಬ್ಬಳ್ಳಿಯ ಕಿಮ್ಸ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳೀಯರ ಮಾಹಿತಿ ಮೇರೆಗೆ ಘಟನಾ ಸ್ಥಳಕ್ಕೆ ಕಲಘಟಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನೂ ಬಸ್ಸ ಚಾಲಕನ ಹೆಸರು ಸೇರಿದಂತೆ ಗಾಯಾಳು ಹೆಸರು ಪೊಲೀಸರ ತನಿಖೆಯ ನಂತರ ತಿಳಿದು ಬರಬೇಕಾಗಿದೆ.