July 4, 2025

ಪಬ್ಲಿಕ್ ರೈಡ್ ನ್ಯೂಸ್ ನೆಲಮಂಗಲ:ಖಾಸಗಿ ಯೂಟ್ಯೂಬ್ ವಾಹಿನಿಯ ಮಾಲೀಕನಾಗಿದ್ದ ಮಂಜುನಾಥ್ ಶವ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಸೋಲದೇವನಹಳ್ಳಿ ಅರಣ್ಯ ಪ್ರದೇಶದಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. 

ಬೆಂಗಳೂರು ನಗರ ಜಿಲ್ಲೆ ದಾಸರಹಳ್ಳಿಯ ಮಂಜುನಾಥ ನಗರದ ನಿವಾಸಿ ಮಂಜುನಾಥ್ (38) ಮೃತ ರ್ದುದೈವಿ.

ಈತ ಬೆಂಗಳೂರಿನ ಬಾಗಲುಗುಂಟೆಯಲ್ಲಿ ಟಿವಿ11 ಎಂಬ ಯೂಟ್ಯೂಬ್ ಚಾನಲ್ ನಡೆಸುತ್ತಿದ್ದ. ಇತ ರಾತ್ರಿ ಸಾವಿಗೂ ಮುನ್ನಾ ತನ್ನ ಕಚೇರಿಯಲ್ಲಿ ಫೇಸ್‌ಬುಕ್‌ನಲ್ಲಿ ಲೈವ್ ಬಂದು ಒಂದಿಷ್ಟು ಮಾಹಿತಿ ಹಂಚಿಕೊಂಡಿದ್ದಾರೆ ಲೈವ್‌ನಲ್ಲಿ 

ಕೆಲ ಪೊಲೀಸರು ಚಕ್ರಬಡ್ಡಿ ವ್ಯವಹಾರ ಮಾಡಿ ಹಿಂಸೆ ನೀಡುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಪೊಲೀಸರಿಂದ ತನಗಾದ ಅವಮಾನವನ್ನ ತಿಳಿಸಿದ್ದಾರೆ ಪೊಲೀಸರು ಅಮಾನುಷವಾಗಿ ದೌರ್ಜನ್ಯ ಮಾಡಿದ್ದಾರೆ ಎಂದು ಗೋಳಾಡಿದ್ದಾರೆ. ನಮ್ಮ ಜತೆ ಕೆಲಸ ಮಾಡುವ ಮಹಿಳೆಯರ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಇದು ಸರಿಯಿಲ್ಲ, ಎಂದು ನಗುನಗುತ್ತಲೇ ಲೈವ್ ಕೊನೆಗೊಳಿಸಿದ್ದರೆ. 

ಮರುದಿನ ಬೆಳಗ್ಗೆ ಮಂಜುನಾಥ್‌ ಮೃತದೇಹ ಸೋಲದೇವನಹಳ್ಳಿ ಅರಣ್ಯ ಪ್ರದೇಶದಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಧಾವಿಸಿದ ನೆಲಮಂಗಲ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ನನ್ನ ಸಾವಿಗೆ ಯಾರೂ ಕಾರಣರಲ್ಲ, ನಾನು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದೇನೆ, ಕ್ಷಮಿಸಿ ಬಿಡಿ ಎಂದು ಬರೆದಿರುವ ಡೆತ್‌ನೋಟ್ ಪತ್ತೆಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

 ಮೃತನ ತಾಯಿ ಸರೋಜಮ್ಮ ಮಾತನಾಡಿ ನನ್ನ ಮಗ ಆತ್ಮಹತ್ಯೆ ಮಾಡಿಕೊಳ್ಳುವವನಲ್ಲ ಯಾವ ವಿಷಯವನ್ನು ನಮಗೆ ತಿಳಿಸಿಲ್ಲ, ಇದು ಆತ್ಮಹತ್ಯೆಯೋ, ಇಲ್ಲ ಕೊಲೆಯೋ ಗೊತ್ತಿಲ್ಲ. ಪೊಲೀಸರು ಸೂಕ್ತ ತನಿಖೆ ಮಾಡಿ ನ್ಯಾಯಕೊಡಿಸಬೇಕು ಎಂದು ಮನವಿ ಮಾಡಿದರು.

ಆತ್ಮಹತ್ಯೆ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸದ್ಯ ಘಟನೆಗೆ ಸಂಬಂಧಿಸಿದಂತೆ ನೆಲಮಂಗಲ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆಗೆ ಮುಂದಾಗಿದ್ದಾರೆ. ತನಿಖೆಯ ಬಳಿಕವಷ್ಟೆ ಈತನ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬರಬೇಕಿ‍ದೆ.

 “ನೇಣು ಬಿಗಿದ್ದ ಸ್ಥಿತಿಯಲ್ಲಿ ಸಾವನೊಪ್ಪಿದ ಮಂಜುನಾಥ್ ಸಾವಿನ ಬಗ್ಗೆ ಸಾಕಷ್ಟು ಅನುಮಾನಗಳು ಮೇಲ್ನೋಟಕ್ಕೆ ಕಾಣುತ್ತಿದ್ದು ಸಾವಿನ ಹಿಂದೆ ಇರುವ ಸತ್ಯ ಸತ್ಯತೆಯನ್ನು ಇಲಾಖೆಯ ತನಿಖೆ ಮೂಲಕ ಹೊರ ತರಬೇಕಾಗಿದೆ “

Leave a Reply

Your email address will not be published. Required fields are marked *

error: Content is protected !!