
ಹುಬ್ಬಳ್ಳಿ
ಜಮೀನಿನಲ್ಲಿ ಕೆಲಸ ಮಾಡು ವಿಚಾರವಾಗಿ ತಂದೆ ಮಗನ ನಡುವೆ ಆರಂಭವಾಗಿದ್ದ ಗಲಾಟೆಯಲ್ಲಿ ಜೀವ ನೀಡಿದ ತಂದೆಯನ್ನೇ ಹತ್ಯೆ ಮಾಡಿ ಪರಾರಿಯಾಗಿದ್ದ ಕಿರಾತಕ ಮಗನನ್ನು ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ಹಿಡಿದು ತರುವಲ್ಲಿ ಯಶಸ್ವಿಯಾಗಿದ್ದಾರೆ.
ಗಿರಿಯಾಲ ಗ್ರಾಮದ ಹೊರವಲಯದ ಜಮೀನಿನಲ್ಲಿ ಇಂದು ಮದ್ಯಾಹ್ನ ಮುಂಚೆ ಐವತ್ತೆಂಟು ವರ್ಷದ ಉಮೇಶ ಸುಡೇಕನವರನ್ನು ಮಗ ಹನುಮಂತಪ್ಪ ಕೊಲೆ ಮಾಡಿ ಪರಾರಿಯಾಗಿದ್ದ, ಬಳಿಕ ಪರಿಶೀಲನೆ ನಡೆಸಿದ ಗ್ರಾಮೀಣ ಠಾಣೆಯ ಇನ್ಸ್‌ಪೆಕ್ಟರ್ ಮುರುಗೇಶ ಚೆನ್ನಣ್ಣವರ ಆ್ಯಂಡ್ ಟೀಂ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದಿದ್ದರು.
ಕೊಲೆ ನಡೆದ ಕೆಒವೇ ಗಂಟೆಗಳಲ್ಲಿ ಈಗ ಕೊಲೆ ಆರೋಪಿ ಹತ್ಯೆಯಾದ ಉಮೇಶನ ಮಗ ಹನುಮಂತಪ್ಒನನ್ನು ಹೆಡೆಮುರಿ ಕಟ್ಟಿ ತರುವಲ್ಲಿ ಸಕ್ಸಸ್ ಆಗಿದ್ದಾರೆ. ಸದ್ಯ ಈಗ ಕೊಲೆ ಆರೋಪಿಯನ್ನು ಗ್ರಾಮೀಣ ಠಾಣೆಯ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.