
ಬೆಳಗಾವಿ
ಹುಕ್ಕೇರಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಿಗೆ ಜಿಲ್ಲಾ ಉಸ್ತುವಾರಿ ಲೋಕೋಪಯೋಗಿ ಸಚಿವ ಸನ್ಮಾನ್ಯ ಶ್ರೀ ಸತೀಶ್ ಜಾರಕಿಹೊಳಿ ಪತ್ರ ಹಾಗೂ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರು ಬೆಂಗಳೂರು ಅವರ ಆದೇಶಕ್ಕೆ ಇಲ್ಲಿಯ ಪ್ರಾಚಾರ್ಯ ಪಟಾಯ ಕವಡೆ ಕಾಶಿನ ಕಿಮ್ಮತ್ತು ನೀಡುತ್ತಿಲ್ಲ ಅನ್ನೋ ಆರೋಪ ಕೇಳಿ ಬರುತ್ತಿದೆ.
ಅದೇನು ಅಂದ್ರೆ ಯಾವುದೇ ಹೊಸ ಸರಕಾರ ಬಂದರೆ ಅಲ್ಲಿಯ ಸರಕಾರಿ ಕಾಲೇಜು ಅಭಿವೃದ್ಧಿಗೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅವರ ಸಮಸ್ಯೆ ತೊಂದರೆಗಳಿಗೆ ಉತ್ತಮ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾ ಮಂತ್ರಿ ಅವರು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರಿಗೆ ಅಭಿವೃದ್ಧಿ ಸಮಿತಿಯ ಸದಸ್ಯರ ಪತ್ರ ನೀಡುತ್ತಾರೆ ಅದಕ್ಕೆ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರು ಬೆಂಗಳೂರು ಅವರು ಆದೇಶ ಮಾಡಿ ಹುಕ್ಕೇರಿ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರ ಪಟ್ಟಿ ಕಳಿಸಿಕೊಡುತ್ತಾರೆ, ಆದರೆ ವಾರಗಳು ಕಳೆದರು ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರಿಂದ ಬಂದ ಆದೇಶ ಪತ್ರ ಹುಕ್ಕೇರಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಪಟಾಯ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಿಗೆ ಏನನ್ನು ತಿಳಿಸದೆ ಅದನ್ನು ಇಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ.
ಸರಕಾರದಿಂದ ಸಂಬಳ ಪಡೆದು ಈ ರೀತಿ ಮಾಡುವುದು ಸರಿನಾ!.. ಎಷ್ಟೋ ಬಾರಿ ಶಿಕ್ಷಣ ತಜ್ಞರು ಸ್ಥಳೀಯ ಮುಖಂಡರು ಅವರಿಗೆ ಕರೆ ಮಾಡಿದರೆ ಏನೇನೋ ಹಾರಿಕೆ ಉತ್ತರ ನೀಡುತ್ತಾರೆ ಎನ್ನುವ ಆರೋಪ ಕೂಡ ಇವರ ಮೇಲಿದೆ.
ಜಿಲ್ಲಾ ಮಂತ್ರಿ ಪತ್ರ ನೀಡಿದರು ಹಾಗೂ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರ ಆದೇಶಕ್ಕೂ ಮಣಿಯದ ಈ ಪ್ರಾಚಾರ್ಯ ಯಾಕೆ ಹೀಗೆ ಮಾಡ್ತಾ ಇದ್ದಾರೆ ಕೆಲವು ಕಾಣದ ಕೈಗಳು ಅವರನ್ನು ಹಾದಿ ಬಿಡಿಸುವ ಕೆಲಸ ಮಾಡುತ್ತಿವೆಯಾ? ಹೀಗೇಕೆ ಮಾಡುತ್ತಿದ್ದಾರೆ ಅನ್ನೋದೇ ಯಕ್ಷಪ್ರಶ್ನೆಯಾಗಿದೆ ಇನ್ನಾದರೂ ರಾಜಕೀಯ ಮಾಡುವುದನ್ನು ಬಿಟ್ಟು ವಿದ್ಯಾರ್ಥಿಗಳ ಅಭಿವೃದ್ಧಿ ಅವರ ಬೆಳವಣಿಗೆಗೆ ಹೆಚ್ಚು ಮಹತ್ವ ಕೊಡಲೆಂದೇ ಇಲ್ಲಿಯ ಸ್ಥಳೀಯರ ಆಗ್ರಹವಾಗಿದೆ…
ವರದಿ ಸಂತೋಷ್ ನಿರ್ಮಲೇ ಬೆಳಗಾವಿ ಜಿಲ್ಲಾ ವರದಿಗಾರರು