
ಪಬ್ಲಿಕ್ ರೈಡ್ ನ್ಯೂಸ್ ಬೆಂಗಳೂರು ಉತ್ತರ : ದಾಸನಪುರ ಹೋಬಳಿ ಹುಸ್ಕೂರು ಗ್ರಾಮ ಪಂಚಾಯತ್ ನೂತನ ಕಟ್ಟಡ ಉದ್ಘಾಟನೆಯನ್ನು ಪರಮಪೂಜ್ಯ ನಿರ್ಮಲ ನಂದ ಸ್ವಾಮೀಜಿಗಳು. ಮತ್ತು ಶ್ರೀ ಸ್ಪಟಿಕಪುರಿ ಮಹಾಸಂಸ್ಥಾನ ಸಿ ನಂಜಾವಧೂತ ಮಹಾಸ್ವಾಮಿಗಳು. ದಿವ್ಯ ಸಾನಿಧ್ಯದೊಂದಿಗೆ ಮತ್ತು ಯಲಹಂಕ ವಿಧಾನಸಭಾ ಕ್ಷೇತ್ರ ಶಾಸಕರಾದ ಎಸ್ ಆರ್ ವಿಶ್ವನಾಥ್ ರವರ ಉದ್ಘಾಟನೆಯೊಂದಿಗೆ.
ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಡಾ. ಬಿ ರಮೇಶ್ ರವರು ಅಧ್ಯಕ್ಷತೆಯಲ್ಲಿ ನೆರವೇರಿತು. ವಿನೂತನ ವಿನ್ಯಾಸದೊಂದಿಗೆ ಪಂಚಾಯತಿಯ ಆವರಣದಲ್ಲಿ ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆ ಅನಾವರಣ ಮಾಡಲಾಯಿತು ಇದರ ಜೊತೆಗೆ ಅರಿವು ಕೇಂದ್ರ,ಮತ್ತು ಡಿಜಿಟಲ್ ಗ್ರಂಥಾಲಯ, ಅಂಚೆ ಕಚೇರಿ,ಸಂಜೀವಿನಿ ಭವನ, ವಾಣಿಜ್ಯ ಮಳಿಗೆಗಳು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಆಂಬುಲೆನ್ಸ್ ಲೋಕಾರ್ಪಣೆ, ಸಾರ್ವಜನಿಕ ಶೌಚಾಲಯ, ಗ್ರಾಮೀಣಾ ಪುನರ್ವಸತಿ ಕಾರ್ಯಕರ್ತರ ಕಚೇರಿ, ಗ್ರಾಮ ಆಡಳಿತ ಅಧಿಕಾರಿಗಳ ಕಚೇರಿ, ಬಯಲು ಸಭಾಂಗಣ, ಇಷ್ಟು ಸೌಲಭ್ಯಗಳು, ಪಂಚಾಯಿತಿಯ ಕಚೇರಿ ವಿಭಾಗದ ಆವರಣದಲ್ಲಿ ಕರ್ನಾಟಕದ ಇತಿಹಾಸದಲ್ಲೇ ಇದೇ ಮೊದಲು ಮಾದರಿ ಗ್ರಾಮ ಪಂಚಾಯಿತಿ ಲೋಕಾರ್ಪಣೆಯಾಗಿರುವುದು, ವಿಶೇಷ ಸಂಗತಿಯಾಗಿದೆ! ಕಾರ್ಯಕ್ರಮದ ಆಯೋಜನೆಯಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಎಚ್ ಆರ್ ರಾಜೇಶ್, ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಎಚ್ ಕೆ ಕೆಂಪಮ್ಮ, ಪಂಚಾಯತಿ ಕಾರ್ಯದರ್ಶಿ ಎಸ್ಆರ್ ಗೋಪಾಲ್, ಪಂಚಾಯತಿ ಸರ್ವ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.