
ಧಾರವಾಡ
ಹಿಂದು ಮುಸ್ಲಿಂಗಳ ಭಾವೈಕ್ಯತೆ ಹಬ್ಬವೆಂದೇ ಖ್ಯಾತಿ ಪಡೆದಿರುವ ಮೋಹರಂ ಹಬ್ಬದ ಸಂಭ್ರಮ ಧಾರವಾಡ ತಾಲೂಕಿನ ಜೋಗೆಲ್ಲಪುರ ಗ್ರಾಮದಲ್ಲಿ ಮನೆ ಮಾಡಿದೆ. ಕಳೆದ ನಾಲ್ಕು ದಿನಗಳಿಂದ ಮೊರಹಂ ದೇವರ ಪ್ರತಿಷ್ಠಾಪನೆ ಮಾಡಲಾಗಿದ್ದು, ಇಂದು ಐದನೇಯ ದಿನ ಜತೆಗೆ ಕೊನೆಯ ದಿನವಾದ ಹಿನ್ನಲೆಯಲ್ಲಿ ಗ್ರಾಮದ ಸಂಭ್ರಮ ಜೋರಾಗಿದೆ. ಮಕ್ಕಳ ಹೆಜ್ಕೆ ಮಜಲು ನೋಡುಗರ ಗಮನ ಸೆಳೆಯಿತು.
ಮೊಹರಂ ಹಬ್ಬದ ಹಿನ್ನಲೆಯಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ಗ್ರಾಮದ ದರ್ಗಾದಲ್ಲಿ ಬಿಬಿ ಪಾತೀಮಾ ಹಾಗೂ ಫಕೀರಸ್ವಾಮಿ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿತ್ತು. ಗ್ರಾಮದ ಹಿಂದು ಮುಸ್ಲಿಂರು ಒಟ್ಟುಗೂಡಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥನೆ ಸಲ್ಲಿಸುತ್ತಾ ಬಂದಿದ್ದರು. ಕಳೆದ ಮಂಗಳವಾರ ಎಲ್ಲರು ಒಟ್ಟುಗೂಡಿ ಕತ್ತಲ ರಾತ್ರಿ ಮಾಡಿ, ಇಂದು ಮುಂಜಾನೆ ದೇವರುಗಳ ಭೇಟಿ ಕಾರ್ಯಕ್ರಮ ನಡೆಯಿತು.
ಇನ್ನೂ ದೇವರು ದರ್ಗಾದಿಂದ ಹೊರ ಬರುತ್ತಿರುವುದನ್ನು ನೋಡಲು ಗ್ರಾಮದಸ್ಥರೆಲ್ಲರು ದರ್ಗಾದ ಮುಂಭಾಗದಲ್ಲಿ ನಿಂತು ಕೈ ಮುಗಿದು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.
ದೇವರು ಮೆರವಣಿಗೆ ಹೊರಡುತ್ತಿದಂತೆ, ದೇವರ ಮುಂದೆ ಮಕ್ಕಳ ಹೆಜ್ಕೆ ಮಜಲು ನೋಡುಗುರು ಗಮನಸೆಳೆಯಿತು. ಒಟ್ಟಿನಲ್ಲಿ ಜೋಗೆಲ್ಲಪುರ ಗ್ರಾಮದಲ್ಲಿ ಹಿಂದು ಮುಸ್ಲಿಂ ಭೇಧವಿಲ್ಲದೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಲ್ಲರು ಅರ್ಥಪೂರ್ಣವಾಗಿ ಮೊಹರಂ ಹಬ್ಬವನ್ನು ಗ್ರಾಮಸ್ಥರು ಆಚರಿಸುವುದರ ಮೂಲಕ ಇತರರಿಗೆ ಮಾದರಿಯಾದರು.