
ಹುಬ್ಬಳ್ಳಿ
ಬೈಕ್ ಸವಾರರಿಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಬೈಕ್ ಸವಾರರಿಬ್ಬರು ದಾರುಣವಾಗಿ ಸಾವನಪ್ಪಿರುವ ಘಟನೆ, ಹುಬ್ಬಳ್ಳಿ ಹೊರವಲಯದ ರಾಷ್ಟ್ರೀಯ ಹೆದ್ದಾರಿಯ ಎನ್ ಹೆಚ್ 4 ರಲ್ಲಿ ತಡ ರಾತ್ರಿ ನಡೆದಿದೆ. ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಆಸ್ತಿಕಟ್ಟಿ ಗ್ರಾಮದ ನಿವಾಸಿಗಳಾದ ಆನಂದ ನಾಯಕರ(34), ಈರಣ್ಣ ಬಡಿಗೇರ (36) ಮೃತ ಬೈಕ ಸವಾರರೆಂದು ಗುರುತಿಸಲಾಗಿದೆ.
ಬೈಕ್ ಮೇಲೆ ಹೊರಟ್ಟಿದ ಇಬ್ಬರು ಬೈಕ್ ಸವಾರರಿಗೆ ಅಪರಿಚಿತ ವಾಹನ ರಭಸವಾಗಿ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಬೈಕ್ ಸವಾರರಿಬ್ಬರ ಗಂಭೀರವಾದ ಪೆಟ್ಟು ಬಿದ್ದ ಕಾರಣ ಸ್ಥಳದಲ್ಲೇ ಅಸುನಿಗಿದ್ದಾರೆ. ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ದಕ್ಷಿಣ ಸಂಚಾರಿ ಠಾಣೆಯ ಪೊಲೀಸರು, ಬೈಕ್ ಸವಾರರ ಮೃತ ದೇಹವನ್ನು, ಮರಣೋತ್ತರ ಪರೀಕ್ಷೆಗಾಗಿ ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಿ ತನಿಖೆ ಕೈಗೊಂಡಿದ್ದಾರೆ.