
ಧಾರವಾಡ.
ವಿದ್ಯಾರ್ಥಿಗಳ ಸ್ಕಾಲರ್ಶಿಪ್, ಕಾರ್ಮಿಕ ಮಕ್ಕಳ ವಿದ್ಯಾರ್ಥಿ ವೇತನ ಕಡಿತ ಹಾಗೂ ಹಾಸ್ಟೆಲ್ ಸಮಸ್ಯೆ ಪರಿಹರಿಸಲು ಅಗ್ರಹಿಸಿ ಧಾರವಾಡದಲ್ಲಿ ನೂರಾರು ವಿದ್ಯಾರ್ಥಿಗಳು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೊಇಷ ಲಾಡ್ ಅವರ ಕಚೇರಿ ಮುತ್ತಿಗೆ ಹಾಕಿ ತಮ್ಮ ಆಕ್ರೋಶ ಹೊರಹಾಕಿದರು.
ಎಬಿವಿಪಿ ಸಂಘಟನೆಯು ನೇತೃತ್ವದಲ್ಲಿ ನಗರದ ಜಿಲ್ಲಾ ಪಂಚಾಯತಿ ಆವರಣದಲ್ಲಿರೋ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಅವರ ಕಚೇರಿ ನುಗ್ಗಿದ ವಿದ್ಯಾರ್ಥಿಗಳು ರಾಜ್ಯ ಸರ್ಕಾರದ ವಿರುದ್ಧ ಹಾಗೂ ಕಾರ್ಮಿಕ ಸಚಿವ ಸಂತೋಷ ಲಾಡ್ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯಾರ್ಥಿಗಳ ಮುತ್ತಿಗೆ ತಡೆಯಲು ಪೊಲೀಸರು ಹರಸಾಹಸ ಪಡಬೇಕಾಯಿತು. ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಅವರ ನೇತು ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ವಿದ್ಯಾರ್ಥಿ ಸಮುದಾಯಗಳುಗೆ ಈ ಹಿಂದಿನಿಂದಲೂ ನೀಡಲಾಗುತ್ತಿದ್ದ ಸ್ಕಾಲರ್ಶಿಪ್ ಬಿಡುಗಡೆಯಾಗುತ್ತಿಲ್ಲ. ಜತೆಗೆ ಕಾರ್ಮಿಕ ಮಕ್ಕಳ ವೇತನವನ್ನು ಸಚಿವರಾದ ಸಂತೋಷ ಲಾಡ್ ಅವರು ಕಡಿತ ಮಾಡಿದ್ದಾರೆ, ಇದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನೆ ಮಾಡಿದರು.
ಅಲ್ಲದೆ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಬಸ್ ಪಾಸ ಕೂಡಾ ಕಾಲೇಜ ಅವಧಿಗೂ ಮುನ್ನವೇ ಮುಗಿಯುತ್ತಿವೆ. ಹಾಸ್ಟೆಲ್ ಸಮಸ್ಯೆ ಲೂಡಾ ಹೆಚ್ಚಾಗಿದೆ. ಹಾಗಾಗಿ ಈ ಕೂಡಲೇ ಸಿಎಂ ಸಿದ್ಧರಾಮಯ್ಯನವರು ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಬಿಡುಗಡೆ ಮಾಡಬೇಕು, ಕಾರ್ಮಿಕರ ಮಕ್ಕಳ ವಿದ್ಯಾರ್ಥಿ ವೇತನ ಕಡಿತ ಹಿಂಪಡೆಯಬೇಕು, ಇದರ ಜತೆಗೆ ಹಾಸ್ಟೆಲ್ ಬಸ್ಸ ಪಾಸ್ ಸಮಸ್ಯೆ ಪರಿಹರಿಸಬೇಕು ಎಂದು ಅಗ್ರಹಿಸಿದರು. ಒಂದು ವೇಳೆ ನಿರ್ಲಕ್ಷ್ಯ ತೋರಿದಲ್ಲಿ ಇಂದಿನ ಸಾಂಕೇತಿಕ ಹೋರಾಟವನ್ನು ಉಗ್ರ ರೂಪಕ್ಕೆ ತಿರುಗಿಸುವುದಾಗಿ ಎಚ್ಚರಿಕೆ ನೀಡಿದರು.
ವರದಿ ಕಿರಣ ಬಳ್ಳಾರಿ