
ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯದಾಸರಹಳ್ಳಿ: ವಿಧಾನಸಭಾ ಕ್ಷೇತ್ರದ ರಾಜಗೋಪಾಲನಗರ ವಾರ್ಡಿನ ಬಿಜೆಪಿ ಮುಖಂಡ ಹಾಗೂ ಉದ್ಯಮಿ ದಿನೇಶ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಶಾಲಾ ಮಕ್ಕಳಿಗೆ ನೋಟ್ ಬುಕ್ ವಿತರಣೆ ಮಾಡುವ ಮೂಲಕ ತಮ್ಮ ಕಾರ್ಯಕರ್ತರು ಮುಖಂಡರು ಹಾಗೂ ಅಭಿಮಾನಿಗಳೊಂದಿಗೆ ತಮ್ಮಹುಟ್ಟುಹಬ್ಬವನ್ನು ಆಚರಿಸಿಕೊಂಡರು.
ಈ ಕಾರ್ಯಕ್ರಮಕ್ಕೆ ದಾಸರಹಳ್ಳಿ ಕ್ಷೇತ್ರದ ಶಾಸಕ ಎಸ್. ಮುನಿರಾಜು ಆಗಮಿಸಿ ಹುಟ್ಟು ಹಬ್ಬಕ್ಕೆ ಶುಭ ಹಾರೈಸಿದರು. ಬಿಜೆಪಿ ಮುಖಂಡರಾದ ಶ್ರೀಮತಿ ರಕ್ಷಾ ಗುರು ನಿಶ್ಚಲ್, ಮಾಜಿ ಉಪ ಮಹಾಪೌರರಾದ ಶ್ರೀಮತಿ ಪದ್ಮಾವತಿ ಅವರ ಪತಿ ನರಸಿಂಹಮೂರ್ತಿ, ಶ್ರೀಮತಿ ಸವಿತಾ ದಿನೇಶ್ ಅವರ ಕುಟುಂಬಸ್ಥರು ಹಾಗೂ ಬಿಜೆಪಿ ವಾರ್ಡ್ ಅಧ್ಯಕ್ಷ ನರಸಿಂಹಮೂರ್ತಿ, ರಾಜಗೋಪಾಲನಗರ ವಾರ್ಡ್ ಮಾಜಿ ಅಧ್ಯಕ್ಷ ನಾಗೇಶ್, ವೈ ಜಿ.ನಾಗರಾಜ್, ಮೋಹನ್ (ಟಿವಿ ಅಂಗಡಿ),ಆರ್ ಸಿ.ಹರೀಶ್, ಕಂಪ್ಯೂಟರ್ ವಿಜಯ್, ಹರೀಶ್,ಕೆಂಪಣ್ಣ, ಡಬಲ್ ರಾಮಣ್ಣ, ಮಂಜುನಾಥ್, ಜೆಡಿಎಸ್ಎಸ್ ಸಿ ವಿಭಾಗದ ಅಧ್ಯಕ್ಷ ನಾಗರಾಜ್, ಯುವ ಮೋರ್ಚಾ ಅಧ್ಯಕ್ಷ ನವೀನ್, ಕಲಾವಿದ ಕುಣಿಗಲ್ ರಾಮಚಂದ್ರ, ರೇಣುಕಮ್ಮ, ಇನ್ನು ಹಲವಾರು ಬಿಜೆಪಿ ಮುಖಂಡರು, ಕಾರ್ಯಕರ್ತರು, ವೃದ್ರಾಶ್ರಮ ಹಾಗೂ ಪೌರಕಾರ್ಮಿಕರೊಂದಿಗೆ, ಅಭಿಮಾನಿಗಳು ಹಾಗೂ ಉದ್ಯಮಿಗಳು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಹುಟ್ಟುಹಬ್ಬಕ್ಕೆ ಶುಭ ಕೋರಿ ಸಿಹಿ ಹಂಚಲಾಯಿತು. ಆಗಮಿಸಿದ್ದ ಅಭಿಮಾನಿಗಳಿಗೆ ಊಟದ ವ್ಯವಸ್ಥೆ ಮಾಡಲಾಯಿತು.