
ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ :ಸಮೀಪದ ಬಾಗಲಗುಂಟೆಯ ಬಿಬಿಎಂಪಿ ಕಛೇರಿ ಅವರಣದಲ್ಲಿ ಯುನೈಟೆಡ್ ವೇ ಬೆಂಗಳೂರು ಸ್ವಯಂ ಸೇವಾ ಸಂಸ್ಥೆ ವತಿಯಿಂದ ಸಿಎಸ್ಅರ್ ಅನುದಾನದಡಿಯಲ್ಲಿ ಪೌರಕಾರ್ಮಿಕರಿಗೆ ಉಚಿತ ಪೊರಕೆ,ಕೈಗವಸು,ರಿಪ್ಲೆಕ್ಟರ್ ಜಾಕೆಟ್,ರೈನ್ ಕೋಟ್, ಕ್ಯಾಪ್, ಪ್ಲಾಸ್ಟಿಕ್ ಬಾಂಡ್ಲಿ ಮುಂತಾದ ಸಾಮಾಗ್ರಿಗಳನ್ನು ದಾಸರಹಳ್ಳಿ ವಲಯ ಆಪರ ಅಯುಕ್ತ ಬಾಲಶೇಖರ್ ಅವರ ಕಡೆಯಿಂದ ವಿತರಿಸಲಾಯಿತು.
ಬಳಿಕ ಬಾಲಶೇಖರ್ ಮಾತನಾಡಿ’ ಈ ಸಂಸ್ಥೆಯವರು ಈಗಾಗಲೇ ಅನೇಕ ಸಮಾಜಮುಖಿ ಕೆಲಸಗಳಾದ ಇಂಗು ಗುಂಡಿ ತೆಗೆಯುವುದು, ಸರ್ಕಾರಿ ಶಾಲೆಗಳಿಗೆ ಬಣ್ಣ ಹೊಡೆಯುವುದು, ಬಡ ಜನರಿಗೆ ಸಹಾಯ ನೀಡುವುದು ಮುಂತಾದ ಮಾದರಿ ಕೆಲಸಗಳನ್ನು ಮಾಡುತ್ತಿದ್ದಾರೆ ಮುಂದೆಯೂ ಕೂಡ ಹೆಚ್ಚಿನ ಸಮಾಜಮುಖಿ ಕೆಲಸ ಮಾಡಲಿ’ ಎಂದರು.
ಈ ಸಂಧರ್ಭದಲ್ಲಿ ಬಿಬಿಎಂಪಿ ಮುಖ್ಯ ಎಂಜಿನಿಯರಿಂಗ್ ರವಿ,ಹಿರಿಯ ತೋಟಗಾರಿಕೆ ಸಹಾಯ ನಿರ್ದೇಶಕ ಹನುಮಂತ ನಾಯ್ಕ, ತೋಟಗಾರಿಕೆಯ ಶಿವಲಿಂಗೇಗೌಡ, ಘನತ್ಯಾಜ್ಯ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಯೋಗೇಶ್,ಲೀಡ್ ಎನ್ವಿರಾನ್ಮೆಂಟ್ ಪ್ರಾಜೆಕ್ಟ್‌ನ ಕೆ. ರಾಧಕೃಷ್ಣ ಪ್ರದೀಪ್, ಯುನೈಟೆಡ್ ವೇ ಬೆಂಗಳೂರು ಉಪಾಧ್ಯಕ್ಷ ವೆಂಕಟ ಸುಧಾಕರ್,ಮತ್ತಿತರರು ಇದ್ದರು.