
ಹುಬ್ಬಳ್ಳಿ; ಸರ್ಕಾರ ಸಾರ್ವಜನಿಕರ ತಮ್ಮ ಆಸ್ತಿ ಮತ್ತೊಂದು ಮಗದೊಂದು ದಾಖಲೆ ಪಡೆಯುವುದಕ್ಕೆ ಸಂಬಂಧಿಸಿದಂತೆ ಕೆಲವು ನಿಯಮ ಹಾಗೂ ಸಮಯವನ್ನು ನಿಗದಿ ಮಾಡಿದೆ. ಆದರೆ ಹುಬ್ಬಳ್ಳಿಯ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಇದ್ಯಾವೂದು ಲೆಕ್ಕಕ್ಕೆ ಇಲ್ಲ. ಸರ್ಕಾರದ ನಿಯಮಗಳನ್ನೇ ಬಂಡವಾಳ ಮಾಡಿಕೊಂಡು ಇಲ್ಲಿ ಕೆಲಸ ನಿರ್ವಹಿಸುವ ಅಧಿಕಾರಿಗಳು ಸಾರ್ವಜನಿಕರಿಂದ ಹಗಲು ದರೋಡೆ ನಡೆಸಿರುವ ಗಂಭೀರ ಆರೋಪ ಕೇಳಿ ಬಂದಿದೆ.
ನಗರದ ಮಿನಿ ವಿಧಾನ ಸೌಧ ಒಂದನೆ ಮಹಡಿಯಲ್ಲಿರುವ ಹುಬ್ಬಳ್ಳಿಯ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಯಾವುದೇ ದಾಖಲೆ ಪಡೆಯಲು ಅದಕ್ಕೆ ಅದರದೇಯಾದ ಹಣ ಪಡೆದುಕೊಂಡು, ನಂತರ ಒಂದು ಸಮಯ ನಿಗದಿ ಪಡೆಸಿ ಹಣ ಪಡೆದ ಒಂದು ರೆಸೀಪ್ಟ್ ಜತೆಗೆ ದಿನಾಂಕ ನಮೂದಿಸಿ ಕೋಡುತ್ತಾರೆ. ಇದೂ ಸರ್ಕಾರಿ ನಿಯಮವು ಕೂಡಾ ಹೌದು, ಆದರೆ ಇಲ್ಲಿ ಸರ್ವಜನಿಕರ ಅರ್ಜೇನ್ಸಿಯನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವು ಅಧಿಕಾರಿಗಳು ಹಣದ ಮೂಲಕ ಜನರ ರಕ್ತ ಹಿರುತ್ತಿದ್ದು, ಇಂತವರ ವಿರುದ್ಧ ಕ್ರಮ ಯಾವಾಗ ಎಂದು ಜನರು ಪ್ರಶ್ನೆ ಮಾಡುತ್ತಿದ್ದಾರೆ.
ಇಲ್ಲಿಯ ಡಿ ದರ್ಜೆಯ ನೌಕರರು ಯಾರೇ ತಮ್ಮ ದಾಖಲೆ ಪಡೆದುಕೊಳ್ಳಲು ಬಂದ್ರೇ, ಅವರಿಗೆ ಸರ್ಕಾರಿ ನಿಯಮ ಪ್ರಕಾರ ಇಂತೀಷ್ಟು ದಿನವಾಗುತ್ತದೆ ಎಂದು ಹೇಳುವ ಮೂಲಕ ಹೆಚ್ಚುವರಿ ಹಣಕ್ಕೆ ಪರೋಕ್ಷವಾಗಿ ಬೇಡಿಕೆ ಇಡುತ್ತಾರೆ. ಬಳಿಕ ಒಂದು ದಾಖಲೆ ನೀಡಲು 500ರಿಂದ ಸಾವಿರ ರೂಪಾಯಿಗೆ ಬೇಡಿಕೆ ಇಡುತ್ತಾರಂತೆ. ಅಷ್ಟೇ ಅಲ್ಲದೇ ಮುಂಗಡವಾಗಿ ಕಚೇರಿಯಲ್ಲಿಯೇ ಖುಲ್ಲಂ ಕುಲ್ಲಾ ಬೈ ಹ್ಯಾಂಡ್ ಆಗಿ ಅರ್ಧ ಹಣ ಪಡೆದುಕೊಳ್ಳುವ ದೃಶ್ಯವನ್ನು ಸಾರ್ವಜನಿಕರೇ ಸೆರೆ ಹಿಡಿದಿದ್ದಾರೆ.
ಇಲ್ಲಿಯ ಡಿ ದರ್ಜೆಯ ನೌಕರರು ಕಡಿಮೆ ಅಂದ್ರೂ ಯುವ ಸಮುದಾಯಕ್ಕೆ ಬುದ್ದಿ ಹೇಳುವ ವಯಸ್ಸಿನವರಿದ್ದು, ಈಗ ತಾವೇ ಸ್ವತಃ ಸಾರ್ಜನಿಕರ ಅರ್ಜೇನ್ಸಿ ಬಂಡವಾಳ ಮಾಡಿಕೊಂಡು ಹಣದ ರೂಪದಲ್ಲಿ ಜನತೆಯ ರಕ್ತ ಹೀರುತ್ತಿರುವುದು ಯಾವ ನ್ಯಾಯ..?, ಸಾರ್ವಜನಿಕರ ತೆರಿಗೆ ದುಡ್ಡಿನಲ್ಲಿ ಸಂಬಳ ಪಡೆದುಕೊಂಡ ಇದರ ಮೇಲೆಯೂ ಈ ರೀತಿಯ ಕಾನೂನು ಬಾಹಿರವಾಗಿ ಹಣ ಪಡೆಯುತ್ತಿದ್ದಾರೆ ಎಂದು ಸಾರ್ವಜನಿಕರು ಹಿಡಿ ಶಾಪ ಹಾಕುತ್ತಿದ್ದಾರೆ.
ಈ ಕೂಡಲೇ ಇಲ್ಲಿರುವ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವುದರ ಜತೆಗೆ ಇವರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಂಡ ಕೂಡಲೇ ವರ್ಗಾವಣೆ ಮಾಡಿ ನಿಷ್ಠಾವಂತ ಅಧಿಕಾರಿಗಳನ್ನು ನಿಯೋಜನೆ ಮಾಡಬೇಕು ಎಂಬುವುದು ಜನತೆಯ ಆಗ್ರಹವಾಗಿದೆ.