
ಹುಬ್ಬಳ್ಳಿ : ಜಮ್ಮು ಕಾಶ್ಮಿರದಲ್ಲಿ ಹಿಂದು ಯಾತ್ರಿಕರ ಮೇಲೆ ಉಗ್ರರರ ದಾಳಿ ಮಾಡಿರುವುದನ್ನು ಖಂಡಿಸಿ ಹಾಗೂ ಉಗ್ರರ ವಿರುದ್ಧ ತಕ್ಕ ಪಾಠ ಕಲಿಸಲು ಅಗ್ರಹಿಸಿ, ಹುಬ್ಬಳ್ಳಿಯಲ್ಲಿ ಹಿಂದು ಸಂಘಟನೆಯ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ಹೊರಹಾಕಿದರು.
ವಿಶ್ವ ಹಿಂದು ಪರಿಷದ್ ಸಂಘಟನೆ ನೇತೃತ್ವದಲ್ಲಿ ನಗರದ ಮಿನಿ ವಿಧಾನಸೌಧ ಮುಂಭಾಗದಲ್ಲಿ ಪ್ರತಿಭಟನೆ ಮಾಡಿದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಗ್ರರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ವೈಷ್ಣವಿದೇವಿಯ ನಾಮ ಸ್ಮರಣೆ ಮಾಡುತ್ತಾ ಸಾಗಿದ ಯಾತ್ರಿಕರ ಮೇಲೆ ಉಗ್ರ ಏಕಾಏಕಿ ಉಗ್ರರು ದಾಳಿ ಮಾಡಿದ್ದು, ಖಂಡನೀಯ. ಹಿಂದು ದೇವಸ್ಥಾನ ಹಾಗೂ ಜನತೆ ಉಗ್ರರಿಗೆ ಏನ್ಮಾಡಿದ್ದಾರೆ. ದೇವರ ಸ್ಮರಣೆ ಮಾಡುತ್ತಾ ಸಾಗಿದವರ ಮೇಲೆ, ಈ ಉಗ್ರರ ಅಟಹಾಸ ಯಾಕೆ..?. ತಾಕತ್ತಿದ್ದರೆ ನಮ್ಮ ಸೇನೆ ಮುಂದುಗಡೆ ಬಂದು ಇವರು ಪೌರುಷ ತೋರಿಸಲಿ. ಅದು ಬಿಟ್ಟು ಅಮಾಯಕರ ಮೇಲೆ ಗುಂಡಿನ ದಾಳೆ ನಡೆಸಿ ಪ್ರಾಣ ತೆಗೆಯುವ ಇವರ ಹೇಯ ಕೃತ್ಯ, ಉಗ್ರರ ಮನಸ್ಥಿತಿ ಎಂತಹದು ಎಂದು ತೋರಿಸುತ್ತದೆ. ಈ ಕೂಡಲೇ ರಾಷ್ಟ್ರಪತಿಗಳು ಈ ವಿಷಯದಲ್ಲಿ ಮಧ್ಯೆ ಪ್ರವೇಶ ಮಾಡಿ, ಸರ್ಕಾರಕ್ಕೆ ಸೂಚನೆ ನೀಡಿ ಉಗ್ರರಿಗೆ ತಕ್ಕ ಪಾಠ ಕಲಿಸಬೇಲುಎಂದು ಎಂದು ಅಗ್ರಹಿಸಿದರು.
ಇದು ಇಂದು ಸಾಂಕೇತಿಕ ಪ್ರತಿಭಟನೆ ಆಗಿದೆ ಬರುವ ದಿನಗಳಲ್ಲಿ ತಕ್ಕ ಪಾಠ ಕಲಿಸಿದಿದ್ದಲ್ಲಿ, ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.