
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ಕಣಗಲಾ ಗ್ರಾಮದ ಮಹಾದೇವ ಕಲ್ಮೇಶ್ವರ ಮಂದಿರದ ಸುತ್ತಮುತ್ತ ಇರುವಂತಹ ಕೋರೆ , ಅಪ್ತಾಗಿರಿ, ತೋಡಕರ ಇವರ ಮನೆಯಿಂದ ನೀರು ಒಂದು ಬಾಗಿಲಿನ ಮೂಲಕ ಒಳಗಡೆ ಬಂದು ಮತ್ತೊಂದು ಬಾಗಿಲಿನ ಮೂಲಕ ಹೊರಗಡೆ ಬಂದಿವೆ.
ನೀರು ಮಹಾದೇವ ಕಲ್ಮೇಶ್ವರ ಮಂದಿರಕ್ಕೆ ಸುತ್ತು ಹಾಕಿ ವಾಳಕಿ ರಸ್ತೆಗೆ ನುಗ್ಗಿ ನದಿ ನೀರು ಬರುವ ಹಾಗೆ ಕಾಣಿಸ್ತಾ ಇದೆ. ಅದೇ ತರ ಕರಜಗಾ ರಸ್ತೆಯ ನಿರ್ಮಲೆ ಪ್ಲಾಟ್ ಅಲ್ಲಿಯೂ ಕೂಡ ನೀರು ಹರಿದು ಬರ್ತಾ ಇದೆ . ಗ್ರಾಮದ NH4 ಬಳಿ ಇರುವಂತಹ ಅಂಬೇಡ್ಕರ್ ಸರ್ಕಲ್ ನಲ್ಲಿರುವ ಐಹೊಳೆ ಇವರ ಮನೆಯಲ್ಲಿಯೂ ಸಹ ನೀರು ಹೊಕ್ಕಿವೆ, ಅದೇ ತರ ಭದ್ರೇಶ್ವರ ಸ್ವಾಮಿ ಮಠದಲ್ಲಿ ಸಹ ನೀರು ಹೊಕ್ಕಿ ತುಂಬಾ ನಷ್ಟ ಉಂಟಾಗಿದೆ. ಇದಕ್ಕೆ ಮುಖ್ಯ ಕಾರಣ ಆ ಜಾಗದಲ್ಲಿ ಅಥವಾ ಆ ಓಣಿಯಲ್ಲಿ ನೀರು ಹೋಗಲು ವ್ಯವಸ್ಥೆಯನ್ನ ಮಾಡದೆ ಇರುವುದು. ಇದಕ್ಕಾಗಿ ಸುತ್ತಮುತ್ತಲಿನ ಎಲ್ಲಾ ಸಾರ್ವಜನಿಕರು ಎಷ್ಟೇ ತಕರಾರು ನೀಡಿದರು ಸಹ ಪಂಚಾಯಿತಿಯವರು ಒಂದೂ ರೀತಿಯ ದೂರ್ಲಕ್ಷತನವನ್ನು ಇಲ್ಲಿ ಮಾಡಿರುತ್ತಾರೆ ಅದಕ್ಕಾಗಿ ಸಾರ್ವಜನಿಕರು ಇದಕ್ಕೆ ಏನಾದರೂ ಮಾಡಿ ನೀರು ಹೋಗಲು ಒಂದು ವ್ಯವಸ್ಥೆ ಮಾಡಬೇಕು ಅಂತ ಮನವಿಯನ್ನ ಮಾಡಿರುತ್ತಾರೆ.
*ವರದಿಗಾರರು: ಸಂತೋಷ ನಿರ್ಮಲೆ*