
ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ: ರಾಜಗೋಪಾಲನಗರ ವಾರ್ಡಿನ ಕಾಂಗ್ರೆಸ್ ಅಧ್ಯಕ್ಷರಾದ ಬಿ ಜಗದೀಶ್ ಕುಮಾರ್ ಹುಟ್ಟುಹಬ್ಬವನ್ನು ಜೆ ಡಿ ಎನ್ ಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ತುಳಸಿ ಗಿಡ ನೀಡುವುದರ ಮುಖಾಂತರ ಸರಳವಾಗಿ ಜನ್ಮದಿನವನ್ನು ಆಚರಿಸಲಾಯಿತು.
ಈ ವೇಳೆ ಶುಭ ಕೋರಲು ಆಗಮಿಸಿದ ಮಾಜಿ ಮಹಾನಗರ ಪಾಲಿಕೆಯ ಸದಸ್ಯರಾದ ಮಂಜುಳಾ ನಾರಾಯಣಸ್ವಾಮಿ ಜನ್ಮದಿನದ ಶುಭ ಕೋರಿ ಮಾತನಾಡಿದ ಅವರು ಜಗದೀಶ್ ಕುಮಾರ್ ವಾರ್ಡಿನಾದ್ಯಂತ ಅತ್ಯಂತ ಹೆಚ್ಚಿನ ಅಭಿಮಾನಿಗಳನ್ನು ಹೊಂದಿದ್ದು ವಾರ್ಡಿನಲ್ಲಿ ಮೂಲಸೌಕರ್ಯ ಸಮಸ್ಯೆಗಳು ಎದುರಾದರೆ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವುದರ ಜೊತೆಗೆ ಬಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಬೇಕಾದಂತ ಸಲಕರಣೆಗಳಾದ ನೋಟ್ ಪುಸ್ತಕ, ಬ್ಯಾಗು, ಶಾಲಾ ಶುಲ್ಕ ಇನ್ನಿತರ ಸಲಕರಣೆಗಳ ಜೊತೆಗೆ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಿ ಉತ್ತೇಜನ ನೀಡ ವಿದ್ಯಾರ್ಥಿ ಮಿತ್ರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ದೇವೇಂದ್ರ ಕುಮಾರ್, ಕೆಪಿಸಿಸಿ ನರಸಿಂಹ, ಕೆಪಿಸಿಸಿ ಕಾರ್ಮಿಕ ವಿಭಾಗದ ಭೈರವ ಗೌಡ, ಮಂಜುನಾಥ್ ಗೌಡ, ಅಪ್ಪು ನಾಗರಾಜ ಗೌಡ: ಪ್ರವೀಣ್, ಸೈಯದ್, ಮೋಹನ್, ಪವನ್ ಹಾಗೂ ಮಹಿಳಾ ಮುಖಂಡರಾದ ಚಂದ್ರಮ್ಮ ಉಷಾರಾಜ್, ಶುಭಾ, ಬಿಬಿಎನ್ ಸೇವಾ ಟ್ರಸ್ಟ್ ಪದಾಧಿಕಾರಿಗಳು ಕಾಂಗ್ರೆಸ್‌ನ ವಾರ್ಡ್ ಮುಖಂಡರು ಬಾಗವಹಿಸಿದ್ದರು.