
ಹುಬ್ಬಳ್ಳಿ ಬ್ರೇಕಿಂಗ್
ಹುಬ್ಬಳ್ಳಿಯ ವೀರಾಪುರ ಓಣಿಯ ಅಂಜಲಿ ಎಂಬ ಯುವತಿ ಕೊಲೆ ಪ್ರಕರಣ ಸಂಬಂಧಿಸಿದಂತೆ ಅಂಜಲಿಯ ಅಜ್ಜಿ ಕಳೆದ ತಿಂಗಳ ಏಪ್ರಿಲ್ 22 ರಂದು ನೆಹಾ ರೀತಿ ನಿನಗೂ ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದ ವಿಶ್ವ ಅಲಿಯಾಸ್ ಗಿರಿ ವಿರುದ್ಧ ಬೆಂಡಿಗೇರಿ ಪೊಲೀಸ್ ಠಾಣೆಗೆ ದೂರು ಕೊಟ್ಟರು ಕೂಡಾ ಮೂಢ ನಂಬಿಕೆಗಳನ್ನು ನಂಬ ಬೇಡಿ ಏನು ಆಗುವುದಿಲ್ಲ ಹೋಗಿ ಎಂದು ಮರಳಿ ಮನೆಗೆ ಕಳುಹಿಸಿದ್ದ ಪೊಲೀಸರು.
ಅದಾಗಲೇ ಆರೋಪಿಯನ್ನು ಕರೆದು ವಿಚಾರಿಸಿ ಸೂಕ್ತ ಕ್ರಮ ಕೈಗೊಂಡಿದ್ದರೆ ಅಂಜಲಿಯ ಕೊಲೆ ಆಗುತ್ತಿರಲಿಲ್ಲ ಎಂಬ ವಿಚಾರ ಓಣಿಯ ಹಿರಿಯರದ್ದ ಆಗಿದೆ. ಇದೆಲ್ಲ ಆಗುವ ನೇರ ಕಾರಣ ಪೊಲೀಸ್ ಇಲಾಖೆಗೆ ಕಳಂಕ ತರುವಂತಹ ಸಂಗತಿ, ಇಂತಹ ಕರ್ತವ್ಯ ಲೋಪಗಳ ಬಗ್ಗೆ ಕಮಿಷನರ್ ರೇಣುಕಾ ಸುಕುಮಾರ್ ಅವರು ಏನು ಕ್ರಮ ಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕಾಗಿದೆ.