
ಪಬ್ಲಿಕ್ ರೈಡ್ ನ್ಯೂಸ್ ಹುಬ್ಬಳ್ಳಿ
ಹುಬ್ಬಳ್ಳಿಯ ವೀರಾಪೂರ ಒಣಿಯಲ್ಲಿ ನಡೆದ ಅಂಜಲಿ ಮೋಹನ ಅಂಬಿಗೇರ ಹತ್ಯೆಯಾಗುವ ಪೂರ್ವ ಅಂಜಲಿ ಕುಟುಂಬದ ಸದಸ್ಯರು ಬೆಂಡಿಗೇರಿ ಪೊಲೀಸ್ ಠಾಣೆಗೆ ತೆರಳಿ ಗಿರೀಶ್ ಸಾವಂತ ಅಲಿಯಾಸ್ ವಿಶ್ವನಾಥ ಕುರಿತು ಅಳಲು ತೊಡಿಕೊಂಡಿದ್ದರು ಸಹ ಸರಿಯಾಗಿ ಸ್ಪಂದಿಸದೆ ಇದೇಲ್ಲ ಮಾಮೂಲು ಅಂತಾ ನಿರ್ಲಕ್ಷ್ಯ ತೋರಿದ್ದರು ಎನ್ನುವ ಆರೋಪ ಬೆಂಡಿಗೇರಿ ಪೊಲೀಸರ ಮೇಲಿದ್ದು, ಆದರೆ ಇಂದು ಬೆಳಿಗ್ಗೆ ನಡೆಯ ಬಾರದ ಘಟನೆಯಲ್ಲಿ ಅಂಜಲಿ ಅಂಬಿಗೇರ ಚಾಕು ಇರಿತಕ್ಕೊಳಗಾಗಿ ತೀವ್ರ ಗಾಯಗೊಂಡಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಈ ಕುರಿತು ಪೊಲೀಸ ಇಲಾಖೆಯ ವಿರುದ್ಧ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದ ಬೆನ್ನಲ್ಲೇ.
ಅವಳಿನಗರದ ಪೊಲಿಸ್ ಆಯುಕ್ತರಾದ ರೇಣುಕಾ ಸುಕುಮಾರ ಅವರು ಇಲಾಖೆ ತನಿಖೆ ಕೈಗೊಂಡು ಬೆಂಡಿಗೇರಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಚಿಕ್ಕೋಡಿ ಸೇರಿದಂತೆ WHC ಆಗಿ ಕರ್ತವ್ಯ ನಿರ್ವಹಿಸುತ್ತಿರುವ ರೇಖಾ ಹಾವರಡ್ಡಿಯವರನ್ನು ಕರ್ತವ್ಯಲೋಪದಡಿ ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ.