
ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ
ರಾಜಗೋಪಾಲ್ ನಗರ ವಾರ್ಡಿನ ಪ್ರಭಾವಿ ಬಿಜೆಪಿ ಮುಖಂಡರು ಹಾಗೂ ಉದ್ಯಮಿಗಳಾದ ದಿನೇಶ್ ಹಾಗೂ ಧರ್ಮಪತ್ನಿ ಸವಿತಾ ರವರ ನಿವಾಸದಲ್ಲಿ ಸಮಾಜ ಸುಧಾರಣೆಯ ಕ್ರಾಂತಿಕಾರಿ ಬಸವ ಜಯಂತಿಯನ್ನು ಭಾವಚಿತ್ರಕ್ಕೆ ಹೂಮಾಲೆ ಹಾಕಿ ಪುಷ್ಪ ನಮನ ಸಲ್ಲಿಸಿ ಸಂಭ್ರಮದಿಂದ ಆಚರಿಸಲಾಯಿತು.
ಈ ವೇಳೆ ದಿನೇಶ್ ರವರು ಮಾತನಾಡಿ 12ನೇ ಶತಮಾನದ ಬಹುದೊಡ್ಡ ಸಮಾಜ ಸುಧಾರಕರು ಬಸವಣ್ಣನವರು ಇವರ ಸಾರಥ್ಯದಲ್ಲಿ ನಡೆದ ಸುಧಾರಣೆಯ ಪ್ರಯತ್ನ ಒಂದು ಸಾಮಾಜಿಕ ಚಳುವಳಿಯಾಗಿ ರೂಪಗೊಂಡಿತು ಇವರ ತತ್ವವಾದರ್ಷಗಳ ಚಿಂತನೆಗಳು ಇಂದಿಗೂ ಪ್ರಸ್ತುತಿ ಇದು ಜೀವನ ಪಾಠವು ಹೌದು ವಿಶ್ವಗುರು ಬಸವಣ್ಣನವರು ಹಾಕಿಕೊಟ್ಟ ದಾರಿಯಲ್ಲಿ ಸಾಗಿದರೆ ಜೀವನ ಸುಖಮಯ ಸಮಾಜವು ಸುಂದರ ಕಾಯಕವೇ ಕೈಲಾಸ ಎಂದು ಕಲಿಸಿಕೊಟ್ಟವರು ಬಸವಣ್ಣನವರು ಎಂದು ತಿಳಿಸಿದರು.
ಈ ವೇಳೆ ಆಗಮಿಸಿದ ಎಲ್ಲರಿಗೂ ಪ್ರಸಾದ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ಮಾಜಿ ಬಿಜೆಪಿ ಅಧ್ಯಕ್ಷರಾದ ವೈ ಜಿ ನಾಗರಾಜ್, ನಾಗೇಶ್, ಬಿಜೆಪಿ ಹಿಂದುಳಿದ ವರ್ಗದ ಅಧ್ಯಕ್ಷ ಮೋಹನ್,ರವಿಶಂಕರ್, ಕಂಪ್ಯೂಟರ್ ಡಿಪಿ ವಿಜಯ್, ರಾಮಣ್ಣ ,ಹರೀಶ್, ರಾಧಾಕೃಷ್ಣ ಶೆಟ್ರು, ರಾಮಚಂದ್ರಪ್ಪ, ಹೇಳುಮಲೈ, ಮಹಿಳಾ ಮುಖಂಡರಾದ ಸಾವಿತ್ರಮ್ಮ, ರೇಣುಕಮ್ಮ, ರತ್ನಮ್ಮ, ಕಲಾಮ್ಮ ,ಈರಮ್ಮ ಇನ್ನು ಹಲವಾರು ಸ್ಥಳೀಯ ನಾಗರಿಕರು ಭಾಗವಹಿಸಿದ್ದರು