
Public Ride News Hubballi
ಹುಬ್ಬಳ್ಳಿ : ಸರ್ಕಾರಿ ಸಾರಿಗೆ ಬಸ್ಸಿಗೆ ಹಿಂಬದಿಯಿಂದ ಕಾರ್ ಚಾಲಕನ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದ ಘಟನೆ ಹುಬ್ಬಳ್ಳಿ ಗಬ್ಬೂರ ರಸ್ತೆ ಬಂಕಾಪುರ ಚೌಕ ಬಳಿ ನಡೆದಿದೆ.
ನಗರದ ಬಂಕಾಪುರ ಚೌಕ ಬಳಿಯ ಪೆಟ್ರೊಲ್ ಬಂಕ್ ಬಳಿ ದುರ್ಘಟಟನೆ ಸಂಭವಿಸಿದೆ. ಇನ್ನೂ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಕಾರ್ ಚಾಲಕನಿಗೆ ಸಣ್ಣಪುಟ್ಟ ಗಾಯವಾಗಿದೆ ಎಂದು ತಿಳಿದು ಬಂದಿದೆ. ಕೆಎ 25ಎಮ್‌ಸಿ 0385 ನೋಂದಣಿಯ ಕಾರ್ ಮುಂಭಾಗ ಜಖಂ ಆಗಿದೆ ಎಂದು ಹೇಳಲಾಗುತ್ತಿದೆ. ಘಟನೆ ನಡೆಯುತ್ತಿದಂತೆ ಸ್ಥಳಕ್ಕೆ ಬಂದ್ ಉತ್ತರ ಸಂಚಾರಿ ಠಾಣೆಯ ಪೊಲೀಸರು ಪರಿಶೀಲನೆ ಕೈಗೊಂಡು ಕಾನೂನು ಕ್ರಮ ಜರುಗಿಸಿದ್ದಾರೆ.