
ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ: ಸಮೀಪದ ಅಂದ್ರಹಳ್ಳಿ ಮುಖ್ಯರಸ್ತೆಯಲ್ಲಿ ಶ್ರೀಮತಿ ರಾಜಮ್ಮ ಮತ್ತು ನಂಜುಂಡಯ್ಯ ಮತ್ತು ಶಿವಕುಮಾರ್ ಮಾಲೀಕತ್ವದ ನೂತನವಾಗಿ ನಿರ್ಮಿಸಿರುವ ಆರ್ ಎನ್ ಎಸ್ ಪಾರ್ಟಿ ಹಾಲ್ ಮತ್ತು ಕಂಫರ್ಟ್ಸ್ ಉದ್ಘಾಟನೆ ಕಾರ್ಯಕ್ರಮಕ್ಕೆ ತುಮಕೂರಿನ ಸಿದ್ದಗಂಗಾ ಮಠಾಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಹಾಗೂ ಸರಗೂರು ಹೊಸಮಠದ ಪರಮಪೂಜ್ಯ ಶ್ರೀ ಬಸವ ರಾಜೇಂದ್ರ ಸ್ವಾಮಿಗಳು ಉದ್ಘಾಟಿಸಿದರು. ಇದೆ ವೇಳೆ ಶಿವಕುಮಾರ್ ಕುಟುಂಬದವರಿಂದ ಪಾದ ಪೂಜೆ ನೆರವೇರಿಸಲಾಯಿತು. ಈ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಆಗಮಿಸಿದ್ದರು.
ಈ ಸಂದರ್ಭದಲ್ಲಿ ಹೇರೋಹಳ್ಳಿ ವಾರ್ಡ್ ಬಿಬಿಎಂಪಿ ಮಾಜಿ ಸದಸ್ಯ ರಾಜಣ್ಣ, ರಾಷ್ಟ್ರೀಯ ಬಸವ ಪ್ರತಿಷ್ಠಾನ ಅಧ್ಯಕ್ಷ ಎಸ್. ಎಂ.ಸುರೇಶ್, ಹಾಗೂ ಕುಟುಂಬಸ್ಥರು ಭಾಗವಹಿಸಿದ್ದರು.