
ಹುಬ್ಬಳ್ಳಿ
ಹುಬ್ಬಳ್ಳಿಯಲ್ಲಿ ಮಳೆರಾಯನ ಅರ್ಭಟಕ್ಕೆ ವಾಹನ ಸವಾರರು ಹೈರಾಣು ವರುಣನ ಆರ್ಭಟಕ್ಕೆ ಕೆರೆಯಂತಾದ ನಗರದ ಯುವ್ ಮಾಲ್ ಬಳಿಯ ರಸ್ತೆ.
ಸಂಪೂರ್ಣ ಜಾಲಾವೃತವಾದ ನಗರದ ಮುಖ್ಯ ರಸ್ತೆಯಲ್ಲಿ ನೀರಿನಲ್ಲಿ ನಿಂತ ಹಲವು ದ್ವಿಚಕ್ರ ವಾಹನಗಳು ಪಾರ್ಕ ಮಾಡಿದ ವಾಹನ ತೆಗೆದುಕೊಳ್ಳಲು ವಾಹನ ಮಾಲೀಕರ ಹರಸಾಹಸ ಮಾಡುವ ದೃಶ್ಯ ಕಂಡುಬಂದಿದೆ.
ರಸ್ತೆ ಜಾಲಾವೃತವಾದರೂ ಸ್ಥಳಕ್ಕೆ ಬಾರದ ಮಹಾನಗರ ಪಾಲಿಕೆಯ ಅಧಿಕಾರಿಗಳ ಬಗ್ಗೆ ಜನರ ಆಕ್ರೋಶ ಹೊರಹಾಕಿದರು. ರಸ್ತೆ ಜಲಾವೃತದ ಜೊತೆಗೆ ಹಲವು ಮಳಿಗೆಗಳಿಗೆ ನುಗ್ಗಿದ ಮಳೆ ನೀರಿನಿಂದ ತತ್ತರಿಸಿದ ಬೀದಿ ಬದಿಯ ವ್ಯಾಪಾರಸ್ಥರು ಕೂಡಾ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಧಾರವಾಡದಲ್ಲಿ ತೆಂಗಿನ ಮರಕ್ಕೆ ಸಿಡಿಲು ಬಡಿದು ಬೆಂಕಿ ಬೆಚ್ಚಿಬಿದ್ದ ಜನರು ಧಾರವಾಡ ತಾಲೂಕಿನ ಶಿವಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ…
ಮಧ್ಯಾಹ್ನದ ನಂತರ ಗಾಳಿ ಗುಡುಗು ಸಹಿತ ಮಳೆಯಿಂದ ಶಿವಳ್ಳಿ ಗ್ರಾಮದ ಕನ್ಹಯ್ಯಾ ಹಿರೇಮಠ ಅವರ ಮನೆಯ ಬಳಿ ಇದ್ದ ತೆಂಗಿನ ಮರಕ್ಕೆ ಸಿಡಿಲು ಬಡಿದು ಹಾನಿಯಾಗಿದೆ.
ಜಿಟಿಜಿಟಿ ಮಳೆಯ ನಡುವೆಯೂ ಹೊತ್ತಿ ಉರಿದ ಮರದ ಮುಖ್ಯಭಾಗ ಸಿಡಿಲು ಬಡಿದು ಬೆಂಕಿ ನೋಡಿ ಅಚ್ಚರಿಯಿಂದ ನೋಡಲು ಜನ ಸೇರಿದ್ದರು.