
ಪಬ್ಲಿಕ್ ರೈಡ್ ನ್ಯೂಸ್ ಹುಬ್ಬಳ್ಳಿ
ಹುಬ್ಬಳ್ಳಿ ಕಳೆದೊಂದು ವಾರದಿಂದ ಬಿಸಿಲಿನ ತಾಪದಿಂದ ತತ್ತರಿಸಿದ ಹೋಗಿದ್ದ ವಾಣಿಜ್ಯ ನಗರಿ ಹುಬ್ಬಳ್ಳಿಯ ಜನತೆಗೆ ಇಂದು ಮಳೆರಾಯ ತಮಪೇರೆದಿದ್ದು, ಗುಡುಗು ಸಹಿತ ವರುಣನ ಅರ್ಭಟಕ್ಕೆ ಹುಬ್ಬಳ್ಳಿಯಲ್ಲಿ ಕೆಲಕಾಲ ಜನ ಜೀವನ ಅಸ್ತವ್ಯಸ್ತವಾಗಿದೆ. ಮುಂಜಾನೆ ಕೆಲಹೊತ್ತು ಬಿಸಲು ಕಾಣಿಸಿಕೊಂಡಿತ್ತಾದ್ರೂ ಮಧ್ಯಾಹ್ನದನಂತರ ಮೋಡ ಕವಿದ ವಾತಾವರಣ ಕಂಡು ಬಂದಿತ್ತು.
ಮೂರು ಗಂಟೆಯ ನಂತರ ನಗರದ ಬಿರುಗಾಳಿ ಸಹಿತ ಸಹಿತ ಆರಂಭವಾದ ಮಳೆ ನಂತರ ಗುಡುಗು ಸಹಿತ ವರ್ಷಧಾರೆ ಅರ್ಭಟಿಸಿದ್ದಾನೆ.
ಇನ್ನೂ ಮಳೆರಾಯನ ಆಗಮನದಿಂದ ನಗರದ ಮಾರುಕಟ್ಟೆಯ ಬೀದಿ ಬದಿಯ ವ್ಯಾಪಾರಸ್ಥರು ಹಾಗೂ ವಾಹನ ಸವಾರರು ಕೆಲಕಾಲ ಮಳೆಯಿಂದ ರಕ್ಷಣೆಗಾಗಿ ಓಡಾಟ ನಡೆಸಿದ್ದರು.
ಸತತವಾಗಿ ಸುಮಾರು ಒಂದು ಗಂಟೆಯಿಂದ ಬಿಟ್ಟು ಬಿಡದೆ ಮಳೆರಾಯನ ಅರ್ಭಟ ತೋರುತ್ತಿದ್ದು, ಸಿಡಿಲಿನ ಅಬ್ಬರಕ್ಕೆ ನಗರ ವಾಸಿಗಳು ಬೆಚ್ಚಿ ಬೀಳುವಂತೆ ಮಾಡಿದೆ. ನಿರಂತರವಾದ ಮಳೆಯಿಂದಾಗಿ ತಗ್ಗು ಪ್ರದೇಶದ ನಿವಾಸಿಗಳಲ್ಲಿ ಮನೆಗೆ ನೀರು ನುಗ್ಗು ಭೀತಿ ಎದುರಾಗಿದೆ. ವರ್ಷಧಾರೆ ಆಗಮನದಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಬರಗಾಲದಿಂದ ತತ್ತರಿಸಿ ಹೋಗಿದ್ದ ರೈತ ಸಮುದಾಯ ಹಾಗೂ ಜಾನುವಾರುಗಳಿಗೆ ಮಳೆರಾಯನ ಆಗಮನ ಸಂತಸ ಮೂಡಿಸಿದೆ.