
ಪಬ್ಲಿಕ್ ರೈಡ್ ನ್ಯೂಸ್ ಬೆಳಗಾವಿ
ಕಣಗಲಾ ಕಾಯಕವೇ ಕೈಲಾಸ ಎಂದು ಮಾನವ ಕುಲಕ್ಕೆ ಸಂದೇಶವನ್ನು ನೀಡಿದ ಬಸವಣ್ಣನವರ ಹುಟ್ಟಿದ ದಿನದಂದು ಸಮಾಜಕ್ಕೆ ತನ್ನದೇ ಆದ ತತ್ವಗಳ ಮೂಲಕ ಸಾಮಾಜಿಕ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಿದ ಮಹಾ ಸಂತನ ಜನ್ಮದಿನವಾದ ಮೇ 10 ರಂದು ಕಣಗಲಾ ಗ್ರಾಮದಲ್ಲಿ ಬಸವಜ್ಯೊತಿಯನ್ನು ತಂದು ಶ್ರೀ ಬಸವ ಜಯಂತಿ ಉತ್ಸವ ಸಮಿತಿ ವತಿಯಿಂದ ಶ್ರೀ ಬಸವ ಸರ್ಕಲ್ ಮಾರ್ಗವಾಗಿ ಶ್ರೀ ಮಹಾದೇವ ಕಲ್ಮೇಶ್ವರ ಮಂದಿರಕ್ಕೆ ಜ್ಯೋತಿಯನ್ನು ತರಲಾಯಿತು.
ನಂತರ ಮಂದಿರದಿಂದ ಗ್ರಾಮದ ಪ್ರಮುಖ ಗ್ರಾಮದ ಗಲ್ಲಿಗಳಲ್ಲಿ ಪಲ್ಲಕ್ಕಿ ಮೆರವಣಿಗೆಯನ್ನು ಮಾಡಲಾಯಿತು. ಪಲ್ಲಕ್ಕಿಯ ಮೆರವಣಿಗೆಯ ನಂತರ ಮಹಾಪ್ರಸಾದದ ಸೇವಿಸಿ ಎಲ್ಲ ಗ್ರಾಮಸ್ಥರು ಪುನೀತರಾದರು.
ವರದಿಗಾರರು:ಸಂತೋಷ ನಿರ್ಮಲೆ