ಹುಬ್ಬಳ್ಳಿ; ಎನ್ ಎಸ್ ಎಸ್ ಸ್ವಯಂ ಸೇವಕರಲ್ಲಿ ಸ್ವಯಂ ಶಿಸ್ತಿನ ಜೊತೆಗೆ, ನಮ್ಮ ಪರಿಸರ, ಆರೋಗ್ಯ ಸೇವಾ ಮನೋಭಾವನೆ ಬೆಳೆಯುವುದು ಕಾಲೇಜು ಹಂತದ ಎನ್ ಎಸ್ ಘಟಕಗಳಿಂದ ಮಾತ್ರ ಸಾದ್ಯ ಎಂದು ಕವಿವಿ ಸಿಂಡಿಕೇಟ್ ಸದಸ್ಯರಾದ ಮಹೇಶ ಹುಲ್ಲೆನ್ನವರ ಹೇಳಿದರು.
ಕರ್ನಾಟಕ ವಿಶ್ವ ವಿದ್ಯಾಲಯ ಧಾರವಾಡ ರಾಷ್ಟ್ರೀಯ ಸೇವಾ ಯೋಜನೆ ಕೋಶ ಹಾಗೂ ಕೆ.ಎಲ್.ಈ ಮೃತ್ಯುಂಜಯ ಪದವಿ ಮಹಾವಿದ್ಯಾಲಯದ ವತಿಯಿಂದ ಮಂಗಳವಾರ ಮೃತ್ಯುಂಜಯ ಪದವಿ ಕಾಲೇಜಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ಧಾರವಾಡ ಜಿಲ್ಲೆಯ ಎನ್ ಎಸ್ ಎಸ್ ಅಧಿಕಾರಿಗಳಿಗೆ ವಿಶ್ವವಿದ್ಯಾಲಯ ಮಟ್ಟದ ಒಂದು ದಿನದ ತರಬೇತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಮುಂದುವರೆದು ಮಾತನಾಡುತ್ತ ಅವರು ಮಹಾತ್ಮಾ ಗಾಂಧೀಜಿಯವರ ಸ್ವಚ್ಛ ಭಾರತ ಅಭಿಯಾನ ಮತ್ತು ಅವರ ಕನಸನ್ನು ನನಸು ಮಾಡುವ ಕಾರ್ಯವನ್ನು ಎನ್ ಎಸ್ ಎಸ್ ಮಾಡುತ್ತಿದೆ ಎಂದು ಹೇಳಿದರು.
ಎನ್ ಎಸ್ ಎಸ್ ಮೂಲಕ ಹಸಿರು ವಾತಾವರಣ ಸೃಷ್ಟಿಸಲು ಸಸಿನೆಡುವ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ಮಾಡುವ ಮೂಲಕ ವಿದ್ಯಾರ್ಥಿಗಳೊಂದಿಗೆ ಅವಿನಾಭಾವ ಸಂಬಂಧದ ಮೂಲಕ ಎನ್ ಎಸ್ ಎಸ್ ಘಟಕಗಳನ್ನು ಮುಂದುವರೆಸಿಕೊಂಡು ಹೋಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಅಶೋಕ್ ಚಿಕ್ಕೋಡಿಯವರು ಅಧ್ಯಕ್ಷೀಯ ನುಡಿಗಳನ್ನು ನುಡಿದರು,
ಕಾರ್ಯಕ್ರಮದಲ್ಲಿ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು, ಅಶೋಕ್ ಚಿಕ್ಕೋಡಿ, ಮತ್ತು ಎನ್ ಎಂ ಹೊಣಕೇರಿ, ಎನ್ ಎಸ್ ಎಸ್ ಜಿಲ್ಲಾ ನೋಡಲ್ ಅಧಿಕಾರಿ ಡಾ.ಜಯಾನಂದ.ವಿ.ಹಟ್ಟಿ, ರವೀಂದ್ರ ಬಿ. ಅವರು, ಶಂಕರಗೌಡ, ಮಂಜುನಾಥ ಮತ್ತು ನೆಹರೂ ಯುವ ಕೇಂದ್ರದ ಗೌತಮ್ ರೆಡ್ಡಿ, ಕಾರ್ಯಕ್ರಮ ಅಧಿಕಾರಿಗಳಾದ ನಾಗರಾಜ್ ಕೊಟಗಾರ್ ಸೇರಿದಂತೆ 165 ಮಹಾವಿದ್ಯಾಲಯದ ಎನ್ ಎಸ್ ಎಸ್ ಕಾರ್ಯಕ್ರಮ ಅಧಿಕಾರಿಗಳು ಮತ್ತು ಸ್ವಯಂ ಸೇವಕರು ಕಾರ್ಯಕ್ರಮದಲ್ಲಿ ಉಪಸ್ತಿತರಿದ್ದರು.
ಪ್ರಾಚಾರ್ಯರಾದ ಎನ್ ಸಿ ಪಾಟೀಲ್ ಅವರು ಸ್ವಾಗತಿಸಿದರು. ಕವಿವಿ ಕಾರ್ಯಕ್ರಮ ಸಂಯೋಜನಾಧಿಕಾರಿಗಳಾದ ಡಾ. ಎಂ.ಬಿ ದಳಪತಿ ಪ್ರಾಸ್ತಾವಿಕ ನುಡಿ ನುಡಿದರು. ಕಾರ್ಯಕ್ರಮ ಅಧಿಕಾರಿಗಳಾದ ಉಮೇಶ್ ನೀಲಪ್ಪನವರ ನಿರೂಪಿಸಿದರು. ಪ್ರೊ ಶ್ರೀದೇವಿ ಸಂಗೊಳ್ಳಿ ವಂದಿಸಿದರು.
