Oplus_16908288
ಬೆಂಗಳೂರು: ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಪರಂಪರೆಯಿಂದ ಬಳಕೆಯಲ್ಲಿದ್ದ ‘ಸ್ಟೋಚ್ ಹ್ಯಾಟ್’ಗಳಿಗೆ ವಿದಾಯ ಹೇಳಿ, ಈಗ ‘ಸ್ಮಾರ್ಟ್ ಪೀಕ್ ಕ್ಯಾಪ್’ಗಳು ಸೇರ್ಪಡೆಯಾಗಲಿವೆ. ಅಕ್ಟೋಬರ್ 28ರಿಂದ ಕಾನ್‌ಸ್ಟೆಬಲ್ ಹಾಗೂ ಹೆಡ್ ಕಾನ್‌ಸ್ಟೆಬಲ್‌ಗಳಿಗೆ ಹೊಸ ಟೋಪಿಗಳ ವಿತರಣೆ ಪ್ರಾರಂಭವಾಗಲಿದೆ.ಮಂಗಳವಾರ ನಡೆಯುವ ವಿಶೇಷ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಜಿ. ಪರಮೇಶ್ವರ ಅವರು ಹೊಸ ಟೋಪಿಗಳ ವಿತರಣೆ ಆರಂಭಿಸಲಿದ್ದಾರೆ. ನಂತರ ಹಂತ ಹಂತವಾಗಿ ರಾಜ್ಯದ ಎಲ್ಲಾ ಜಿಲ್ಲೆಗಳ ಸಿಬ್ಬಂದಿಗೆ ಈ ಪೀಕ್ ಕ್ಯಾಪ್‌ಗಳನ್ನು ನೀಡಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಹೊಸ ಟೋಪಿಗಳು ತೆಲಂಗಾಣ ಪೊಲೀಸರ ಮಾದರಿಯಂತಿದ್ದು, ಹಗುರ ಮತ್ತು ಆರೋಗ್ಯದ ದೃಷ್ಟಿಯಿಂದ ಅನುಕೂಲಕರವಾಗಿವೆ. ಹಳೆಯ ಸ್ಟೋಚ್ ಹ್ಯಾಟ್‌ನಿಂದ ಉಂಟಾಗುತ್ತಿದ್ದ ತೊಂದರೆಗಳ ಹಿನ್ನೆಲೆಯಲ್ಲಿ ಈ ಬದಲಾವಣೆಗೆ ಸರ್ಕಾರ ಮಂಜೂರು ನೀಡಿದೆ.
ಹೆಚ್ಚು ಕಾಲದ ಕರ್ತವ್ಯ ವೇಳೆ ಮತ್ತು ಪ್ರತಿಭಟನೆ, ಪೆರೇಡ್ ಸಂದರ್ಭಗಳಲ್ಲಿ ಬಳಸಲು ಸುಲಭ, ತಲೆಯ ಮೇಲೆ ಗಟ್ಟಿಯಾಗಿ ನಿಲ್ಲುವಂತೆ ವಿನ್ಯಾಸಗೊಂಡಿರುವುದೇ ಹೊಸ ಪೀಕ್ ಕ್ಯಾಪ್‌ಗಳ ವಿಶೇಷತೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪೊಲೀಸ್ ಕಿಟ್ ನಿರ್ದಿಷ್ಟತಾ ಸಮಿತಿಯು ವಿವಿಧ ರಾಜ್ಯಗಳ ಟೋಪಿಗಳನ್ನು ಪರಿಶೀಲಿಸಿ, ತೆಲುಗು ರಾಜ್ಯದ ಮಾದರಿಯನ್ನು ಸೂಕ್ತವೆಂದು ಆಯ್ಕೆ ಮಾಡಿತ್ತು. ಈಗಂತಹ ಬದಲಾವಣೆಗಳಿಂದ ಸಿಬ್ಬಂದಿ ಕಾರ್ಯನಿರ್ವಹಣೆಯಲ್ಲಿನ ಸೌಕರ್ಯ ಮತ್ತು ಸ್ಮಾರ್ಟ್ ಲುಕ್ ಎರಡೂ ಲಭ್ಯವಾಗಲಿವೆ.
