ಧಾರವಾಡ: ನ್ಯಾಯಮೂರ್ತಿ ಬಿ.ಆರ್ ಗವಾಯಿ ಮೇಲೆ ನಡೆದ ಶೂ ದಾಳಿ ಖಂಡಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಕಾನೂನು ಪರವಾಗಿ ತೀರ್ಪು ನೀಡಿದ ನ್ಯಾಯಮೂರ್ತಿ ಬಿ.ಆರ್ ಗವಾಯಿ ಮೇಲೆ ವಿಕೃತ ಮನಸ್ಸಿನ, ಜನವಿರೋಧಿ ಹಾಗೂ ಸಂವಿಧಾನ ವಿರೋಧಿ ಮನಸ್ಥಿತಿ ಹೊಂದಿದ ವಕೀಲ ರಾಕೇಶ್ ಕಿಶೋರ ಶೂ ಎಸೆದಿದ್ದಾರೆ. ವಕೀಲ ರಾಕೇಶ ಕಿಶೋರ್ ಮೇಲೆ ಕಠಿಣ ಕ್ರಮ ಜರುಗಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಬಸವರಾಜ ಲಗಮ್ಮನವರ, ಚಂದ್ರಶೇಖರ ದೊಡಮನಿ, ಕಾರ್ತಿಕ್ ಹಲಗಿ, ಶರೀಫ್ ಹರಿಜನ, ಮಂಜು ತಳಗೇರಿ, ನಾಗರಾಜ ಮಾದರ, ಮಾದೇವ ಹಾರಿಜನ ಸೇರಿದಂತೆ ಇತರರು ಇದ್ದರು.
