ಧಾರವಾಡ: ಸಾರಿಗೆ ಇಲಾಖೆ ಅಧಿಕಾರಿಗಳು ಆಧಾರ್ ಕಾರ್ಡ್‍ನ ಭೌತಿಕ ಪ್ರತಿಯನ್ನು ಕೊಂಡೊಯ್ಯಬೇಕಂತಿಲ್ಲ. ಮಹಿಳೆಯರ ಮೊಬೈಲ್ ಫೋನಿನಲ್ಲಿ ಆಧಾರ್‍ನ ಡಿಜಿಟಲ್ ನಕಲು ಅಥವಾ ಆಧಾರ್ ವೆಬ್‍ಸೈಟ್‍ನಿಂದ ಡೌನ್‍ಲೋಡ್ ಮಾಡಿದ ಆಧಾರ್ ಪಿಡಿಎಫ್‍ನ್ನು ಕಂಡಕ್ಟರ್‍ಗೆ ತೋರಿಸಬಹುದು.
ಇದು ಮಹಿಳೆಯರಿಗೆ ಮತ್ತಷ್ಟು ಅನುಕೂಲವನ್ನು ಕಲ್ಪಿಸಿಕೊಡಲಾಗುತ್ತದೆ ಎಂದು ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್.ಪಾಟೀಲ ಅವರು ಇಂದು ಬೆಳಿಗ್ಗೆ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ತಿಳಿಸಿದ್ದಾರೆ.
