ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ : ಗಂಧದಗುಡಿ ಕನ್ನಡ ಯುವಕರ ಸಂಘ(ರಿ.)
ಕರ್ನಾಟಕ ಜನಸ್ಪಂದನ ಟ್ರಸ್ಟ್(ರಿ.) ಇವರ ಸಂಯೋಗದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಮಹೇಶ್ವರಿ ನಗರದ ಡಾ. ರಾಜಕುಮಾರ್ ವೃತ್ತದಲ್ಲಿ ಆಚರಿಸಲಾಯಿತು.
ಇದೇ ಸಂದರ್ಭದಲ್ಲಿ ಧ್ವಜಾರೋಹಣ ಕಾರ್ಯಕ್ರಮವನ್ನು ಮನೋವೀಣಾ ಫೌಂಡೇಶನ್ ಅಧ್ಯಕ್ಷರಾದ ವೀಣಾದೇವಿ ವಿ ಚ್ ಅವರು ನೆರವೇರಿಸಿದರು.
ಈ ವೇಳೆ ಸಿಹಿ ಹಂಚಿ ಅನ್ನದಾನ ಪ್ರಸಾದ ವಿನಿಯೋಗ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಗಂಧದ ಗುಡಿ ಕನ್ನಡ ಯುವಕರ ಸಂಘ ಅಧ್ಯಕ್ಷರಾದ ಪಿ ನಾಗರಾಜು.ಕರ್ನಾಟಕ ಜನಸ್ಪಂದನ ಟ್ರಸ್ಟ್ ನ ರಾಜ್ಯಾಧ್ಯಕ್ಷರಾದ ಹನುಮಂತಪ್ಪ ಎಸ್. ಮೇಡೆಗಾರ, ಉಪಾಧ್ಯಕ್ಷರಾದ ಅಂಬಣ್ಣ ಮುಡಬಿ, ಪಿ.ಶೇಖರ್, ಆನಂದ, ರಮೇಶ ಜಮಖಂಡಿ, ಮಲ್ಲಿಕಾರ್ಜುನ ಕೊಂಗಿ, ಎಂ. ಬಸವರಾಜು ಮುಂತಾದವರಿದ್ದರು.
