ಹುಕ್ಕೇರಿ ತಾಲೂಕಿನ ಕಣಗಲಾ ಗ್ರಾಮದಲ್ಲಿ ಸೋಮವಾರ ದಿನಾಂಕ 11-08-2025 ರಂದು ಕಣಗಲಾ ಗ್ರಾಮದ ಶ್ರೀ ಮಾರುತಿ ಮಂದಿರ ( ಪಶ್ಚಿಮ ದಿಕ್ಕಿನ)ದಲ್ಲಿ ಸಂಕೇಶ್ವರ ಪೋಲಿಸ ಠಾಣೆಯ ಸಿ.ಪಿ.ಆಯ್ ಆದಂತಹ ಶಿವಶಂಕರ ಆವಜಿ ಇವರ ನೇತೃತ್ವದಲ್ಲಿ ನಡೆಯಿತು.

ದಿನಾಂಕ 27-08-2025 ರಂದು ಜರುಗಲಿರುವ ಶ್ರೀ ಗಣೇಶ ಚತುರ್ಥಿಯ ನಿಮಿತ್ಯವಾಗಿ ಕಣಗಲಾ ಗ್ರಾಮದ ಎಲ್ಲ ಗಣೇಶ ಮಂಡಳಿಯವರು, ಗ್ರಾಮ ಪಂಚಾಯತ ಸದಸ್ಯರು, ಗ್ರಾಮಸ್ಥರು ,ಪೋಲಿಸ ಸಿಬ್ಬಂದಿ , ಗ್ರಾಮಸ್ಥರು ಹಾಗೂ ಪತ್ರಕರ್ತರು ಹಾಜರಿದ್ದರು.
ಸಭೆಯಲ್ಲಿ ಸಿ.ಪಿ.ಆಯ್ ಸಹೇಬರು ಮಾತನಾಡಿ ಶ್ರೀ ಗಣೇಶ ಚತುರ್ಥಿಯನ್ನು ಸಾಂತಿಯಿಂದ ಹಾಗೂ ಸರ್ಕಾರದ ನಿಯಮಗಳನ್ವ ಆಚರಿಸಿ ಹಾಗೂ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಶಾಂತಿಯಿಂದ ನಡೆಸಲು ಹಾಗೂ ಶ್ರೀ ಗಣೇಶ ಚತುರ್ಥಿಯ ದಿನ ಎನ್ ಎಚ್ 04 ಹತ್ತಿರ ಅತ್ಯಂತ ಜಾಗರೂಕತೆಯಿಂದ ರಸ್ತೆಯನ್ನು ದಾಟಿಸಿ ತರಬೇಕು ಎಂದು ಹೇಳಿದರು. ಅದೇ ರೀತಿ ಶ್ರೀ ಗಣೇಶ ವಿಸರ್ಜೆನೆಯ ಸಮಯದಲ್ಲಿ ವಿಸರ್ಜನೆ ಮಾಡುವ ಸ್ಥಳದಲ್ಲಿ ಸೂಕ್ತವಾದ ವಿದ್ಯುತ ವ್ಯವಸ್ಥೆಯನ್ನು ಮಾಡಬೇಕು ಅಂತ ಸಭೆಯಲ್ಲಿ ಇರುವಂತಹ ಗ್ರಾಮ ಪಂಚಾಯತ ಅಧಿಕಾರಿಗಳಿಗೆ ಹೇಳಿದರು.
ವರದಿಗಾರರೂ:ಸಂತೋಷ ನಿರ್ಮಲೆ ಪಬ್ಲಿಕ ರೈಡ್ ನ್ಯೂಸ್
