ಹುಬ್ಬಳ್ಳಿ
ಕರ್ನಾಟಕ ಇ ಎಸ್ ಐ ಅಸ್ಪತ್ರೆ ಹೊರಗುತ್ತಿಗೆ ನೌಕರರ ನೂತನ ಸಂಘದ ರಿಜಿಸ್ಟ್ರೇಷನನ ಸರ್ಟಿಫಿಕೇಟ್ ನಿನ್ನೆ ರಾತ್ರಿ ಮಾನ್ಯ ಕಾರ್ಮಿಕ ಸಚಿವರು ಶ್ರೀ. ಸಂತೋಷ ಎಸ್. ಲಾಡ್ ಅವರು ಗೋಕುಲ ರಸ್ತೆಯ ಖಾಸಗಿ ಹೋಟೆಲನಲ್ಲಿ ಉದ್ಘಾಟಿಸಿದರು.
ಇಎಸ್ಐ ಆಸ್ಪತ್ರೆ ಮತ್ತು ಚಿಕಿತ್ಸಲಾಯಕ್ಕೆ ಸಂಘದ ವತಿಯಿಂದ ಸಂಘದ ಸದಸ್ಯರಿಗೆ ಕರ್ತ್ಯವಕ್ಕೆ ಅನುಕೂಲ ಮಾಡಿ ಕೊಡಲು ನೂತನ ಸಂಘಟನೆ ಮನವಿ ಸಲ್ಲಿಸಿದ್ದು, ಮಾನ್ಯ ಸಚಿವರು ಕೂಡ ಒಪ್ಪಿಗ್ಗೆ ನೀಡಿದರು ಎಂದು ಸಂಘದ ಸದಸ್ಯರು ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ಸಂಘದ ವತಿಯಿಂದ ಸಂಘದ ಸದಸ್ಯರಿಗೆ ಸರ್ಕಾರದಿಂದ ಬರುವ ಸವಲತ್ತುಗಳು ನೀಡಲು ಸಂಘದ ವತಿಯಿಂದ ಮನವಿ ಮಾಡಿಕೊಂಡಿರುತ್ತೇವೆ.
ಈ ಸಂದರ್ಭದಲ್ಲಿ ಕರ್ನಾಟಕ ಇ ಎಸ್ ಐ ಅಸ್ಪತ್ರೆ ಹೊರಗುತ್ತಿಗೆ ನೌಕರರ ಸಂಘದ ರಾಜ್ಯಾಧ್ಯಕ್ಷರು, ನವೀನಕುಮಾರ ಎನ್. ಕುಂದಗೋಳ, ಉಪಾಧ್ಯಕ್ಷರು ಶಿವಶಂಕರ ಭಂಡಾರಿ, ಕಾರ್ಯದರ್ಶಿ ಶಿವರಾಜ್ ಹೂಗಾರ, ಖಜಾಂಚಿ ಪವನಕುಮಾರ್ ವಾಯ್. ಉಳ್ಳಾಗಡ್ಡಿ, ಸಂಘಟನಾ ಕಾರ್ಯದರ್ಶಿ, ಆಸೀಫ್ ಮದಗಮಾಸುರ್, ಸದಸ್ಯರು ಮಂಜುನಾಥ್ ಮತ್ತಿಗಟ್ಟಿ ಉಪಸ್ಥಿತರಿದ್ದರು.
