ಪಬ್ಲಿಕ್ ರೈಡ್ ನ್ಯೂಸ್ : ಪೀಣ್ಯ ದಾಸರಹಳ್ಳಿ ಸಮೀಪದ ಶೆಟ್ಟಿಹಳ್ಳಿ ಡಿಎಸ್ ಮ್ಯಾಕ್ಸ್ ಅಪಾರ್ಟ್ಮೆಂಟ್ ಹತ್ತಿರದ ರಸ್ತೆ, ಕಮ್ಮಗೊಂಡನಹಳ್ಳಿ-ಲಕ್ಷ್ಮಿಪುರ ರಸ್ತೆಗೆ ಡಾಂಬರೀಕರಣ ಕಾಮಗಾರಿಗೆ ಶಾಸಕ ಎಸ್. ಮುನಿರಾಜು ಚಾಲನೆ ನೀಡಿದರು. ಕಮ್ಮಗೊಂಡನಹಳ್ಳಿ ಹಾಗೂ ಬಾಗಲಗುಂಟೆ ಕೆರೆಯ ಆವರಣದಲ್ಲಿ ವಿದ್ಯುತ್ ದೀಪ ಅಳವಡಿಕೆ ಕಾಮಗಾರಿಗೆ ಚಾಲನೆ ನೀಡಲಾಯಿತು. ಶೆಟ್ಟಿಹಳ್ಳಿ ಬಿ ಸುರೇಶ್, ಕಿರಣ್, ಬಿ.ಎಂ ನಾರಾಯಣ್, ಗುರುಪ್ರಸಾದ್, ಮುರಳಿ, ಪಿ.ಎಚ್ ರಾಜು, ವಿಜಯಲಕ್ಷ್ಮಿ, ಲಕ್ಷ್ಮಿ, ಜಯಣ್ಣ, ಸೋಲೋಮನ್ ರಾಜು, ಎಂಜಿನಿಯರ್ ಗಳು ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.
