ಹುಬ್ಬಳ್ಳಿ: ಭುವನೇಶ್ವರದಲ್ಲಿ19 ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿಯ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಒಡಿಶಾದ ಎನ್ ಎಸ್ ಯು ಐ ಅಧ್ಯಕ್ಷ ಉದಿತ್ ನಾರಾಯಣ್ ಪ್ರಧಾನ್ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಹುಬ್ಬಳ್ಳಿ ನಗರದ ಬಿವಿಬಿ ಕಾಲೇಜಿನ ಮುಂಭಾಗದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಯಿತು.ಪ್ರಧಾನ್ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಎಬಿವಿಪಿಯ ರಾಜ್ಯ ಕಾರ್ಯದರ್ಶಿ ಸಚಿನ ಕುಳಗೇರಿ ಮಾತನಾಡಿ ವಿದ್ಯಾರ್ಥಿನಿಯನ್ನು ಭೋಜನಕ್ಕೆ ಆಹ್ವಾನಿಸಿ, ತಂಪು ಪಾನೀಯದಲ್ಲಿ ನಿದ್ರೆ ಮಾತ್ರೆಗಳನ್ನು ಬೆರೆಸಿ ಪ್ರಜ್ಞಾಹೀನಗೊಳಿಸಿ, ನಂತರ ಅತ್ಯಾಚಾರ ಮಾಡಿದ್ದಾರೆ. ಈ ಘಟನೆ ಮಾರ್ಚ್‌ನಲ್ಲಿ ಭುವನೇಶ್ವರದ ಹೋಟೆಲ್‌ನಲ್ಲಿ ನಡೆದಿದೆ, ಈ ರೀತಿಯ ಕೃತ್ಯವನ್ನು ಮಾಡಿರುವ ಆರೋಪಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ಮಹಿಳಾ ಸಬಿಲೀಕರಣದ ಬಗ್ಗೆ ಮಾತನಾಡುವ ಕಾಂಗ್ರೆಸ್ ಪಕ್ಷದ ನಾಯಕರು ಉತ್ತರ ನೀಡಬೇಕು,ತಮ್ಮ ಪಕ್ಷದ ವಿದ್ಯಾರ್ಥಿ ನಾಯಕರ ಮೇಲೆ ಇಂತಹ ಗಂಭೀರ ಅಪರಾಧಗಳ ಆರೋಪ ಇದ್ದಾಗ ರಾಹುಲ್ ಗಾಂಧಿ ಏಕೆ ಮೌನವಾಗಿದ್ದಾರೆ? ವಿದ್ಯಾರ್ಥಿಗಳನ್ನು ರಾಜಕೀಯದಲ್ಲಿ ಉತ್ತೇಜಿಸುವ ಕಾಂಗ್ರೇಸ್ ಸಂಸ್ಕೃತಿ ಇದೇನಾ?” ಎಂದು ಪ್ರಶ್ನೆ ಮಾಡಿದರು.

ಎಬಿವಿಪಿಯ ಅರ್ಚಿತಾ ಸಾಬೋಜಿ ಮಾತನಾಡಿ ಮಹಿಳೆಯರನ್ನು ಪೂಜನೀಯ ಭಾವನೆಯಿಂದ ನೋಡುವ ನಮ್ಮ ದೇಶದ ಸಂಸ್ಕೃತಿಯಲ್ಲಿ ಪದೇಪದೇ ಇಂತಹ ಅತ್ಯಾಚಾರ ಪ್ರಕರಣಗಳು ಆಗುತ್ತಿರುವುದು ನಿಜಕ್ಕೂ ಸೂಚನೀಯ ಸಂಗತಿ, ಸಮಾಜದಲ್ಲಿ ಇಂತಹ ಕೆಟ್ಟ ಶಕ್ತಿಗಳಿಂದ ಮಹಿಳೆಯರ ಸುರಕ್ಷತೆ ಇಲ್ಲದಂತಾಗುತ್ತಿದೆ ಇಂತಹ ವ್ಯಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳುವ ಅವಶ್ಯಕತೆ ಇದೆ ಎಂದರು.

ಪ್ರತಿಭಟನೆಯಲ್ಲಿ ದರ್ಶನ ಹೆಗಡೆ, ಧಾನೇಶ ಕಿತ್ತೂರ, ವಿಕ್ರಮ ಗಳಾಂಡೆ, ತಿಲಕ ಕನಕಗಿರಿಮಠ, ಲೋಕೇಶ ಚಿಗರೆರಿ, ಅನ್ಮೂಲ ಕಲಬುರ್ಗಿ, ಬಸಮ್ಮ ಗಾಣಿಗೇರ, ನಿಷಿಕಾ ಜೈನ, ಮನೋಜ ವಾಲ್ಮೀಕಿ, ನವೀನ ಎನ್ ಕೆ ಉಪಸ್ಥಿತರಿದ್ದರು.
