
ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ : ವಿಶ್ವ ಧೂಮಪಾನ ನಿಷೇಧ ದಿನದ ಅಂಗವಾಗಿ ಭಾನುವಾರ ಸೋಲದೇವನಹಳ್ಳಿ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುತ್ತಿದ್ದ ಹಾಗೂ ಗುಟ್ಕಾ ಅಗಿದು ಉಗುಳುತ್ತಿದ್ದವರಿಗೆ ದಂಡ ವಿಧಿಸಿದರು.
ಆತ್ಮೀಯ ಗೆಳೆಯರ ಬಳಗದ ಸುತ್ತ ಮುತ್ತ ಸೋಲದೇವನಹಳ್ಳಿ ಪೊಲೀಸರು ಇನ್ಸ್ಪೆಕ್ಟರ್ ಕೆ.ಕೆ.ರಘು ನೇತೃತ್ವದಲ್ಲಿ ಆರು ಜನ ಸಬ್ ಇನ್ಸ್ಪೆಕ್ಟರ್ ಗಳು ಹಾಗೂ ಸಿಬ್ಬಂದಿಗಳ ಜೊತೆ ದಿಢೀರ್ ಕಾರ್ಯಾಚರಣೆ ಕೈಗೊಂಡು, ಅನುಮತಿ ಪಡೆಯದೆಯೇ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಮಳಿಗೆಗಳ ಮೇಲೆ ದಾಳಿ ನಡೆಸಿ, ಸಾವಿರಾರು ರೂ. ಮೌಲ್ಯದ ಉತ್ಪನ್ನಗಳನ್ನು ಜಪ್ತಿ ಮಾಡಿದರು.
ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಸೇದುತ್ತಿದ್ದ ಮತ್ತು ಗುಟ್ಕಾ ಉಗುಳುತ್ತಿದ್ದವರನ್ನು ಪತ್ತೆ ಮಾಡಿ 100ಕ್ಕೂ ಅಧಿಕ ಪ್ರಕರಣ ದಾಖಲಿಸಿದರು. ಅಲ್ಲದೇ ತಲಾ 200 ರೂ. ದಂಡ ವಿಧಿಸಿದರು.
ಮುಂದಿನ ದಿನಗಳಲ್ಲಿ ಬಾರ್, ಮಾಲ್‌ಗಳು, ಅಂಗಡಿಗಳ ಮೇಲೆ ದಾಳಿ ನಡೆಸಲಾಗುವುದು, ಶಾಲಾ-ಕಾಲೇಜುಗಳ ಸಮೀಪದ ಚಿಲ್ಲರೆ ಅಂಗಡಿ ಮಳಿಗೆಗಳ ಮೇಲೂ ನಿಗಾ ವಹಿಸಲಾಗುವುದು’ ಎಂದು ಪೊಲೀಸರು ತಿಳಿಸಿದ್ದಾರೆ.