
ಪಬ್ಲಿಕ್ ರೈಡ್ ಹುಬ್ಬಳ್ಳಿ
ಕ್ಷುಲ್ಲಕ ಕಾರಣಕ್ಕಾಗಿ ಅಪ್ರಾಪ್ತ ಬಾಲಕರಿಬ್ಬರ ನಡುವೆ ನಡೆದ ಜಗಳದಲ್ಲಿ ಓರ್ವ ಬಾಲಕನ ಪ್ರಾಣ ಪಕ್ಷಿ ಹಾರಿ ಹೋದ ಘಟನೆ ನಗರದ ಕಮರಿಪೇಟಿನ ಜಿ ಅಡ್ಡಾದಲ್ಲಿ ನಡೆದಿದೆ.
ಈ ಘಟನೆಯು ಕಮರಿಪೇಟ ಪೊಲೀಸ್ ಠಾಣೆಯ ಸರಹದ್ದು ನಲ್ಲಿ ನಡೆದಿದ್ದು, ಸಾಯಿ ಎಂಬ ಯುವಕ ಚಾಕುವಿನಿಂದ ಇರದಿದ್ದರ ಪರಿಣಾಮ ಚೇತನ ಎಂಬ ಯುವಕ ಮೃತಪಟ್ಟ ದುರ್ಘಟನೆ ಕೆಲ ಗಂಟೆಗಳ ಹಿಂದೆ ಎಷ್ಟೇ ನಡೆದಿದೆ ಎಂದು ತಿಳಿದುಬಂದಿದೆ.
ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಚೇತನ ಆಸ್ಪತ್ರೆಗೆ ಹೋಗುವ ರಸ್ತೆ ಮಧ್ಯದಲ್ಲಿಯೇ ಕೊನೆಯುಸಿರೆಳೆದಿದ್ದಾನೆ ಎಂದು ತಿಳಿದು ಬಂದಿದೆ. ಇದೆಲ್ಲರ ನಡುವೆ ಬಾಳಿ ಬದುಕ ಬೇಕಿದ್ದ ಯುವಕ ಚೇತನನ ಕಿಮ್ಸ ಆಸ್ಪತ್ರೆಯ ಮುಂದೆ ಚೇತನ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಈ ಘಟನೆಗೆ ಸಂಬಂಧಿಸಿದಂತೆ ಕಮರಿಪೇಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ನಡುವೆ ಮಾತಿನಲ್ಲಿಯೇ ಬಗೆಹರಿಸಬಹುದಾದ ಚಿಕ್ಕ ಪುಟ್ಟ ಜಗಳಗಳು ಹುಬ್ಬಳ್ಳಿಯಲ್ಲಿ ವಿಕೋಪಕ್ಕೆ ಹೋಗುವುದು ಹೆಚ್ಚಾಗಿ ಕಂಡುಬರುತ್ತಿವೆ.