
ಧಾರವಾಡ
ಸೇವಾ ಭಾರತಿ ಟ್ರಸ್ಟ್ ವತಿಯಿಂದ ವಾಸನ್ ಐ ಕೇರ್ ಸಹಯೋಗದಲ್ಲಿ ಧಾರವಾಡ ಗ್ರಾಮಾಂತರ ವ್ಯಾಪ್ತಿಯ ತಲವಾಯಿ ಗ್ರಾಮದಲ್ಲಿ ನಿನ್ನೆ ಗುರುವಾರ ಉಚಿತ ಕಣ್ಣಿನ ತಪಾಸಣೆ ಮಾಡಲಾಯಿತು.
ಈ ವರೆಗೂ ಧಾರವಾಡ ಗ್ರಾಮಾಂತರ ಮತ್ತು ಧಾರವಾಡ ನಗರ ಸೇರಿದಂತೆ 56 ಜನರಿಗೆ ಉಚಿತ ಕಣ್ಣಿನ ತಪಾಸಣೆ 09 ಜನರಿಗೆ ಉಚಿತ ಕಣ್ಣಿನ ಆಪರೇಷನ್ ಮಾಡಲಾಗಿದೆ ಎಂದು ಟ್ರಸ್ಟ್ ಮುಖಂಡರು ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀ ಮಂಜುನಾಥ ಶಿವಪ್ಪ ಮಕ್ಕಳಗೇರಿ(ಸೇವಾ ಭಾರತಿ ಟ್ರಸ್ಟಿ)ಅವರು ಉಪಸ್ಥಿತಿ ಇದ್ದು ಊರಿನ ಗುರುಹಿರಿಯರು ಸಮ್ಮುಖದಲ್ಲಿ ತಪಾಸಣೆ ಶಿಬಿರ ನಡೆಯಿತು.