
ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ,ದಾಸರಹಳ್ಳಿ: ತ್ಯಾಮಗೊಂಡ್ಲು ಹೋಬಳಿಯ ಇತಿಹಾಸ ಪ್ರಸಿದ್ದ ಮಣ್ಣೆ ಗ್ರಾಮ ದೇವತೆಯ ಜಾತ್ರಾ ಮಹೋತ್ಸವ ದಿನಾಂಕ 13-04-2025 ನೇ ಭಾನುವಾರದಿಂದ ದಿನಾಂಕ 20-04-2025ನೇ ಭಾನುವಾರದ ವರೆಗೆ ನಡೆಯಲಿದೆ.
ತಾ.13-04-2025ರ ಭಾನುವಾರ ಪ್ರಥಮ ಪೂಜಿತ ಶ್ರೀ ಗಣೇಶ ದೇವಾಲಯದಲ್ಲಿ ರುದ್ರಾಭಿಷೇಕ, ವಿಶೇಷ ಪೂಜೆ, ಇದೇ ದಿನ ಸಂಜೆ ಶ್ರೀ ಚೌಡೇಶ್ವರಿ ದೇವಿಯವರ ಬೆಲ್ಲದಾರತಿ ಉತ್ಸವ. ತಾ.14-04-2025ರ ಸೋಮವಾರ ಶ್ರೀ ಸೋಮೇಶ್ವರ ಸ್ವಾಮಿ ಬೆಲ್ಲದಾರತಿ ಕಾರ್ಯಕ್ರಮ ಹಾಗೂ ವಿಶೇಷ ಉತ್ಸವ. ತಾ.15-04-2025ರ ಮಂಗಳವಾರ ಶ್ರೀ ಮಣ್ಣಮ್ಮದೇವಿ ಜಾತ್ರಾ ಮಹೋತ್ಸವ ಪ್ರಾರಂಭ. ಮೊದಲ ದಿನ ಅಮ್ಮನವರ ಮಡಿಲಕ್ಕಿ ಉತ್ಸವ ಪ್ರಾರಂಭ ಹಾಗೂ ಇದೇ ದಿನ ಸಂಜೆ ಶ್ರೀ ಊರ ಮಾರಮ್ಮದೇವಿ ಉಪಾದ ಹಾಗೂ ಶ್ರೀ ಮಣ್ಣಿಮ್ಮದೇವಿ ಅಮ್ಮನವರ ಉಪಾರ ಉತ್ಸವ ಹಾಗೂ ವಿಶೇಷ ವಿಜೃಂಭಣೆಯ ಮೆರವಣಿಗೆ. ತಾ.16-04-2025ರ ಬುಧವಾರ ಅಮ್ಮನವರ ಮಡಿಲಕ್ಕಿ ಉತ್ಸವ ಹಾಗೂ ಶ್ರೀ ಪಾಥರಾಜಸ್ವಾಮಿಯವರ ರಾಶಿ ಸೇವೆ. ತಾ.17-04-2025ರ ಗುರುವಾರ ಶ್ರೀ ಮಣ್ಣಮ್ಮದೇವಿ ಅಮ್ಮನವರ ವಿಜೃಂಭಣೆಯ ಮೆರವಣಿಗೆ ಹಾಗೂ ಅಂಗಧಾರಣೆಯೊಂದಿಗೆ ಪುರಪ್ರವೇಶ ಮಡಿಲಕ್ಕಿ ಕಾರ್ಯಕ್ರಮ ಇದೇ ದಿನ ಸಂಜೆ ಶ್ರೀ ಊರ ಮಾರಮ್ಮದೇವಿಯ ತಂಬಿಟ್ಟಿನ ಆರತಿ ಮತ್ತು ಶ್ರೀ ಮಣ್ಣಿಮ್ಮದೇವಿ ಅಮ್ಮನವರ ತಂಬಿಟ್ಟಿನ ಆರತಿ ಕಾರ್ಯಕ್ರಮ.
ತಾ.18-04-2025ರ ಶುಕ್ರವಾರ ಶ್ರೀ ಮಣ್ಣಮ್ಮದೇವಿ ಅಮ್ಮನವರ ವಿಜೃಂಭಣೆಯ ಮೆರವಣಿಗೆ ಅಗ್ನಿಕೊಂಡೋತ್ಸವ ಹಾಗೂ ಇದೇ ದಿನ ಸಂಜೆ ಶ್ರೀ ಕುಕ್ಕಲಮ್ಮದೇವಿಗೆ ತಂಬಿಟ್ಟಿನ ಆರತಿ ಕಾರ್ಯಕ್ರಮ. ತಾ.19-04-20250 ರಂದು ಶ್ರೀ ಮಣ್ಣಿಮ್ಮದೇವಿ ಅಮ್ಮನವರ ಮಹಾ ರಥೋತ್ಸವ ಹಾಗೂ ನೂತನ ರಥದ ಲೋಕಾರ್ಪಣೆ. ತಾ.20-04-2025ರ ಭಾನುವಾರ ಕಡೆ ಪರಿಷೆ ಓಕುಳಿ ಉತ್ಸವ ಶ್ರೀ ಆಂಜನೇಯಸ್ವಾಮಿ ಬೆಲ್ಲದಾರತಿ ಕಾರ್ಯಕ್ರಮ ಹಾಗೂ ಮಣ್ಣಮ್ಮದೇವಿ ಅಮ್ಮನವರ ವಿಜೃಂಭಣೆಯ ಮೆರವಣಿಗೆ ಹಾಗೂ ಕಳ್ಳಾರಾಟ. ದೇವರ ಕುಣಿತದೊಂದಿಗೆ ಜಾತ್ರಾ ಮಹೋತ್ಸವ ಮುಕ್ತಾಯವಾಗಲಿದೆ.
ಪ್ರತಿ ದಿನವೂ ವಿಶೇಷ ಅಲಂಕಾರ, ವಾದ್ಯ, ವೈಭವ, ವಿಶೇಷ ರಥಗಳು. ವಿಜೃಂಭಣೆಯ ಮೆರವಣಿಗೆಗಳು ನಡೆಯುತ್ತವೆ ಹಾಗೂ ಪೌರಾಣಿಕ ನಾಟಕಗಳ ಪ್ರದರ್ಶನ ಇರುವುದರಿಂದ ಭಕ್ತಾದಿಗಳೆಲ್ಲರೂ ಆಗಮಿಸಿ ಗಂಗರಸರ ನಾಡಿನ ವಿಶೇಷ ನಾಡ ಉತ್ಸವವನ್ನು ಕಣ್ತುಂಬಿಕೊಳ್ಳಬೇಕಾಗಿ ವಿನಂತಿಸಲಾಗಿದೆ.