
ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ,ದಾಸರಹಳ್ಳಿ: ‘ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಹೀನಾಯ ಮಟ್ಟಕ್ಕೆ ತಲುಪಿದ್ದು ಅದನ್ನು ಸರಿದೂಗಿಸಲು ಎಲ್ಲಾ ವಸ್ತುಗಳ ಬೆಲೆ ಏರಿಸುವ ಮೂಲಕ ಜನರಿಗೆ ಇನ್ನಷ್ಟು ಬರೆ ಎಳೆಯಲು ಹೊರಟಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದ ರಾಜ್ಯವು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹಿಂದಕ್ಕೆ ಸಾಗುತ್ತಿದೆ. ಜನರ ತೆರಿಗೆ ಹಣದಲ್ಲಿ ಆಟ ಆಡಲು ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರ ಕೊಟ್ಟವರು ಯಾರು’, ಎಂದು ಶಾಸಕ ಎಸ್ ಮುನಿರಾಜು ಹೇಳಿದರು.
ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶೋಭಾ ಅಪಾರ್ಟ್ ಮೆಂಟ್ ಹತ್ತಿರ ಸ್ಯಾನಿಟರಿ ಕಾಮಗಾರಿ, ಚೊಕ್ಕಸಂದ್ರದ ಅಮರಾವತಿ ಬಡಾವಣೆಯ ಎಸ್ ಎಲ್ ವಿ ವುಡ್ ವರ್ಕ್ಸ್ ಹತ್ತಿರ ಸ್ಯಾನಿಟರಿ ಕಾಮಗಾರಿ, ಪೀಣ್ಯ ಕೈಗಾರಿಕಾ ಪ್ರದೇಶ ವಾರ್ಡಿನ ಅಹಂ ಆತ್ಮ ಶಾಲೆ ಹತ್ತಿರ ರಸ್ತೆ ಕಾಮಗಾರಿ ಪೂಜೆ, ರಾಜಗೋಪಾಲನಗರ ವಾರ್ಡಿನ ಮಾರ್ಕಂಡೇಯ ದೇವಸ್ಥಾನದ ಹತ್ತಿರ ಸ್ಯಾನಿಟರಿ ಕಾಮಗಾರಿ, ಬೋಡುಬಂಡೆ ಆಂಜನೇಯ ಸ್ವಾಮಿ ದೇವಸ್ಥಾನದ ಹತ್ತಿರ ಕುಡಿಯುವ ನೀರಿಗೆ ಚಾಲನೆ ಹಾಗೂ ಹೆಗ್ಗನಹಳ್ಳಿ ವಾರ್ಡಿನ ನೀಲಕಂಠೇಶ್ವರ ದೇವಸ್ಥಾನದ ಹತ್ತಿರ ಪಿವಿಸಿ ಪೈಪ್ ಲೈನ್ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ರಾಜಗೋಪಾಲನಗರ ವಾರ್ಡ್ ನ ಪ್ರಭಾವಿ ಬಿಜೆಪಿ ಮುಖಂಡರು, ಸಣ್ಣ ಕೈಗಾರಿಕೆಗಳ ಸಂಘದ ನಿರ್ದೇಶಕರು ಹಾಗೂ ಸಮೃದ್ಧಿ ಫೌಂಡೇಶನ್ ನ ಅಧ್ಯಕ್ಷರಾದ ರಾಜಗೋಪಾಲನಗರ ವಾರ್ಡ್ ನ ಬಿಜೆಪಿ ಮಾಜಿ ಅಧ್ಯಕ್ಷ ನಾಗೇಶ್, ಕೆಸಿ ರವಿಗೌಡ, ಅಶೋಕ್ ಕಾಳಾಚಾರಿ, ಪರಮೇಶ್, ಕೆಂಪೇಗೌಡ(ಗಂಗಣ್ಣ), ಮಗ್ಗ ಶ್ರೀನಿವಾಸ್, ವೆಂಕಟೇಶ್ ಸೇರಿದಂತೆ ಸ್ಥಳೀಯ ಬಿಜೆಪಿ ಮುಖಂಡರು, ಕಾರ್ಯಕರ್ತರು, ಸ್ಥಳೀಯರು ಉಪಸ್ಥಿರಿದ್ದರು.