
ಧಾರವಾಡ
ಚೀನಾ ನಮ್ಮ ದೇಶದ ಗಡಿಯನ್ನು ದಾಟಿ ನುಗ್ಗಿದೆ. ಈ ವಿಚಾರದ ಬಗ್ಗೆ ಮಾತನಾಡದ ಬಿಜೆಪಿ ಇದನ್ನು ಮೆರಮಾಚಲು ವಕ್ಫ ವಿಚಾರವನ್ನು ಮುನ್ನೆಲೆಗೆ ತಂದಿದೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಕಿಡಿಕಾರಿದರು.
ಧಾರವಾಡದಲ್ಲಿ ಮಾದ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಚೀನಾ 175 ಕಿಲೋ ಮೀಟರ್ ನಮ್ಮ ದೇಶದೊಳಗೆ ಬಂದಿದೆ. 600ಕ್ಕೂ ಹೆಚ್ಚು ಹಳ್ಳಿಗಳನ್ನು ಸ್ವಾಧೀನಪಡಿಸಿಕೊಂಡಿದೆ. ಅಲ್ಲಿ ಎರಡು ಪೋಸ್ಟ್ ಕ್ರಿಯೇಟ್ ಮಾಡಿದ್ದಾರೆ. ಇದು ಎಲ್ಲಿಯೂ ಚರ್ಚೆಗೆ ಬರಬಾರದು ಅಂತಾ ವಕ್ಫ ವಿಚಾರ ಮುಂದೆ ತಂದಿದೆ. ಜತೆಗೆ ಬಡತನ, ನಿರುದ್ಯೋಗ ವಿಷಯದಲ್ಲಿ ಚರ್ಚೆ ಆಗಬಾರದು ಎಂಬ ಉದ್ದೇಶ ಬಿಜೆಪಿಯವರದ್ದಾಗಿದೆ. ಅದಕ್ಕಾಗಿ ಇಂತಹ ನಾಟಕಗಳನ್ನು ಮಾಡುತ್ತಿದ್ದಾರೆ. ಅಲ್ಪಸಂಖ್ಯಾತರಿಗೆ ಅವರದ್ದೇ ಆದ ಒಂದು ವ್ಯವಸ್ಥೆ ಇದೆ. ಅವರಿಗೆ ಕಾಯ್ದೆ ಕಾನೂನು ಇವೆ. ಇದು ಆರ್ಟಿಕಲ್ 26ರಲ್ಲಿ ಇದೆ.
ಆದರೂ ಇದನ್ನು ಬಿಜೆಪಿಯುವರು ಉಲ್ಲಂಘನೆ ಮಾಡಿದ್ದಾರೆ. ನಾಳೆ ಇದು ಕೋರ್ಟ್‌ನಲ್ಲಿ ಬೀಳುತ್ತದೆ. ಅದು ಗೊತ್ತಿದ್ದೂ ವಕ್ಫ ಬಿಲ್ ತಿದ್ದುಪಡಿ ಮಾಡಿದ್ದಾರೆ. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಏನೂ ಆಗುತ್ತಿಲ್ಲ. 30 ವರ್ಷಗಳ ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಏನೂ ಆಗಿಲ್ಲ. ಅಲ್ಲಿನ ವ್ಯವಸ್ಥೆ ಹದಗೆಟ್ಟಿದೆ. ಆದರೆ, ಬಿಜೆಪಿ ತನ್ನ ವೈಫಲ್ಯ ಹೇಳಲು ಆಗುತ್ತಿಲ್ಲ. ಮಾಧ್ಯಮಗಳೂ ಬಿಜೆಪಿ ಹೇಳಿದ್ದನ್ನೇ ಹೇಳುತ್ತಿದೆ. ಪಿಎಂ ಆಫೀಸಿನಿಂದಲೇ ಮಾಧ್ಯಮಗಳ ಅಜೆಂಡಾ ತಯಾರಾಗುತ್ತಿದೆ ಎಂದರು.