
ಪಬ್ಲಿಕ್ ರೈಡ್ ಹುಬ್ಬಳ್ಳಿ:ಗ್ಯಾಂಗ್ ವಾರ್ ಪ್ರಕರಣದ ವಿಚಾರಣೆ ವೇಳೆ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಮೇಲೆ ದಾಳಿ ಮಾಡಲು ಪ್ರಯತ್ನಿಸಿದ ರೌಡಿ ಶೀಟರ್ ಕಾಲಿಗೆ ಪೊಲೀಸರು ಗುಂಡೇಟು ನೀಡಿರುವ ಘಟನೆ ನಗರದ ಆನಂದನಗರದ ಹೊರವಲಯದಲ್ಲಿ ನಡೆದಿದೆ.
ರೌಡಿ ಶೀಟರ್ ಮಲ್ಲಿಕ್ ಅಧೋನಿ ಕಾಲಿಗೆ ಪೊಲೀಸರು ಗುಂಡೇಟು ನೀಡಿದ್ದಾರೆ.
ಪ್ರಕರಣದಡಿ ವಿಚಾರಣೆ ಸಂದರ್ಭದಲ್ಲಿ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾಗ ಈ ವೇಳೆ ಗಾಳಿಯಲ್ಲಿ ಮೂರು ಸುತ್ತು ಗುಂಡೇಟು ನೀಡಿ ಬಳಿಕ ರೌಡಿಶೀಟರ್ ಕಾಲಿಗೆ ಗುಂಡೇಟು ನೀಡಿದ್ದು, ಈ ವೇಳೆ ಪಿಎಸ್ಐ ಐ ವಿಶ್ವನಾಥ, ಪೊಲೀಸ್ ಕಾನ್ಸಟೇಬಲ್ ಕಲ್ಲನಗೌಡ, ಶರೀಫ್ ಗೆ ಗಾಯಗಳಾಗಿದ್ದು, ಕಿಮ್ಸ್ ನಲ್ಲಿ ದಾಖಲು ಮಾಡಲಾಗಿದೆ.
*ಹಣಕಾಸಿನ ವಿಚಾರವಾಗಿ ಗಲಾಟೆ : ಕಮೀಷನರ್*
ಹಣಕಾಸಿನ ವಿಚಾರವಾಗಿ ಇರ್ಫಾನ್ ಹಾಗೂ ಮಲ್ಲಿಕ್ ನಡುವೆ ಗಲಾಟೆಯಾಗಿರುತ್ತದೆ. ಇರ್ಫಾನ್ ಬಳಿ ಮಲ್ಲಿಕ್ ನಾಲ್ಕು ಲಕ್ಷ ಹಣ ಪಡೆದುಕೊಂಡಿರುತ್ತಾನೆ. ಹಣ ವಾಪಸ್ ಕೇಳಿದ ಹಿನ್ನಲೆ ಮಲ್ಲಿಕ್ ಹಾಗೂ ಆತನ ಸ್ನೇಹಿತರ ಜೊತೆಗೆ ಸೇರಿ ಇರ್ಫಾನ್ ಮನೆಗೆ ತೆರಳಿ ಗಲಾಟೆಗೆ ಮುಂದಾಗಿದ್ದ ಎಂದು ಹುಧಾ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ತಿಳಿಸಿದರು.
ನಗರದ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಗೊಂಡ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಹಾಗೂ ಗುಂಡೇಟು ತಿಂದ ರೌಡಿಶೀಟರ್ ಆರೋಗ್ಯ ವಿಚಾರಿಸಿ ಮಾಹಿತಿ ಪಡೆದುಕೊಂಡು ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಇರ್ಫಾನ್ ಹಾಗೂ ಆತನ ಸ್ನೇಹಿತ ಕಿಮ್ಸ್ ಗೆ ದಾಖಲಾಗಿದ್ದರು. ಈ ವೇಳೆ ನನಗೂ ಹಲ್ಲೆ ಮಾಡಿದ್ದಾರೆಂದು ಮಲ್ಲಿಕ್ ಆರೋಪಿಸಿದ್ದ, ಈ ಹಿನ್ನಲೆ ಸಿಸಿಟಿವಿ ಪರಿಶೀಲಿನೆ ಮಾಡುವ ಮೂಲಕ ಯಾರು ಹಲ್ಲೆ ಮಾಡಿದ್ದಾರೆಂಬುದು ಸ್ಪಷ್ಟವಾಗಿದೆ ಎಂದರು.
ಇನ್ನೂ ಇನ್ನುಳಿದವರ ಪತ್ತೆಗಾಗಿ ಹೊರವಲಯದಲ್ಲಿ ಸ್ಥಳ ಮಹಜರ್ ಗೆ ತೆರಳಲಾಗಿತ್ತು, ಮಾಹಿತಿಗಾಗಿ ನಮ್ಮ ಸಿಬ್ಬಂದಿ ರೌಡಿಶೀಟರ್ ಮಲ್ಲಿಕ್ ನನ್ನು ಕರೆದುಕೊಂಡು ಹೋಗಿದ್ದರು. ಈ ವೇಳೆ ಪೊಲೀಸರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಪ್ರಯತ್ನಸಿದ್ದಾಗ ಗುಂಡೇಟು ನೀಡಲಾಗಿದೆ. ರೌಡಿಶೀಟರ್ ನಡೆಸಿದ ಹಲ್ಲೆಯಿಂದಾಗಿ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯ ಮೂವರು ಸಿಬ್ಬಂದಿಗಳಿಗೆ ಗಾಯಗಳಾಗಿವೆ. ಗಾಯಗೊಂಡ ಪೊಲೀಸ್ ಸಿಬ್ಬಂದಿಗಳಿಗೆ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.