
ಪಬ್ಲಿಕ್ ರೈಡ್ ಧಾರವಾಡ
ಹುಬ್ಬಳ್ಳಿ ಧಾರವಾಡ ಮಾಹಾನಗರ ಪಾಲಿಕೆಯ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಧಾರವಾಡ ತ್ಯಾಜ್ಯ ವಿಲೇವಾರಿ ಘಟಕ ಸಾಕ್ಷಿಯಾಗಿದೆ. ತ್ಯಾಜ್ಯ ವಿಲೇವಾರಿ ಘಟಕದಲ್ಲಿ ತ್ಯಾಜ್ಯಕ್ಕೆ ಹಚ್ಚು ಬೆಂಕಿಯ ವಿಷಪೂರಿತ ಗಾಳಿಯು ನಾಲ್ಕೈದು ನಗರಗಳಿಗೆ ಪಸರಿಸುತ್ತಿದ್ದು, ಇದರಿಂದಾಗಿ ನಗರ ನಿವಾಸಿಗಳು ಪಾಲಿಕೆಯ ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕುವ ಸ್ಥಿತಿ ನಿರ್ಮಾಣವಾಗಿದೆ.
ಹೌದು ಧಾರವಾಡ ಹೊಸಯಲ್ಲಾಪುರನ ಜನತ ನಗರಕ್ಕೆ ಹೊಂದಿಕೊಂಡಿರುವ ಧಾರವಾಡ ತ್ಯಾಜ್ಯ ವಿಲೆವಾರಿ ಘಟಕದಲ್ಲಿ ತಂದು ಸುರಿಯುವ ಕಸಕ್ಕೆ ಕಿಡಗೇಡಿಗಳು ಬೆಂಕಿ ಹಚ್ಚುತ್ತಾ ಬಂದಿದ್ದು, ಪ್ಲಾಸ್ಟಿಕ್ ಸೇರಿ ಇತರೆ ತ್ಯಾಜ್ಯಗಳ ಸುಟ್ಟು ವಿಷಪೂರಿತ ಹೋಗೆ ತ್ಯಾಜ್ಯ ವಿಲೇವಾರಿ ಘಟಕದ ಲಕ್ಷ್ಮೀ ನಗರ, ಜನತ ನಗರ, ಹೊಸಯಲ್ಲಾಪುರ, ಸರಸ್ವತಿ ಪುರ, ಟೋಲ್ ನಾಕಾ ನಗರಗಳಿಗೆ ಪಸರಿಸುತ್ತಿದೆ. ಈ ವಿಷಪೂರಿತ ಹೋಗೆ ಸೇವಿಸುತ್ತಲೇ ಇಲ್ಲಿನ ಸ್ಥಳೀಯರು ಜೀವನ ಸಾಗಿಸುತ್ತಾ ಬಂದಿದ್ದು, ಆರೋಗ್ಯ ಸಮಸ್ಯೆ ಭೀತಿಯಲ್ಲಿ ಜನ ದಿನಂಪ್ರತಿ ಪಾಲಿಕೆಗೆ ಹಿಡಿಶಾಪ ಹಾಕುತ್ತಿದ್ದಾರೆ. ಪ್ರತಿದಿನ ಮುಂಜಾನೆ ಸಂಜೆ ತ್ಯಾಜ್ಯ ವಿಲೇವಾರಿ ಘಟಕದಿಂದ ವಿಷಪೂರಿತ ದಟ್ಟ ಹೋಗೆ ಸ್ಥಳೀಯ ನಿದ್ದೆಗೇಡಿಸಿದೆ.
ಹಲವು ದಶಕಗಳಿಂದ ಸ್ಥಳೀಯರು ಮನವಿ ಹೋರಾಟ ಮಾಡುತ್ತಾ ಬಂದಿದ್ದರು, ಪಾಲಿಕೆಯ ಅಧಿಕಾರಿಗಳು ಮಾತ್ರಾ ಇದಕ್ಕೆ ಕ್ಯಾರೆ ಎನ್ನುತ್ತಿರುವುದು ಸ್ಥಳೀಯರಲ್ಲಿ ಮತ್ತಷ್ಟು ಆಕ್ರೋಶ ಹೆಚ್ಚಾಗುವಂತೆ ಮಾಡುತ್ತಿದೆ. ಈಗಲಾದ್ರೂ ಪಾಲಿಕೆಯ ಅಧಿಕಾರಿಗಳು ತ್ಯಾಜ್ಯ ವಿಲೇವಾರಿ ಘಟಕ ಸ್ಥಳಾಂತರಿಸಿ ಸ್ಥಳೀಯರ ಆರೋಗ್ಯ ಕಾಪಾಡುತ್ತಾರೋ ಇಲ್ವೋ ಕಾದುನೋಡಬೇಕಾಗಿದೆ.