
ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ: ಚಿಕ್ಕಬಾಣಾವರ ಗಣಪತಿನಗರ ಬಳಿಯ ಮೈದಾನದಲ್ಲಿ ಸ್ಥಳೀಯ ಅಂಗನವಾಡಿಗಳ ಮಕ್ಕಳಿಗೆ ಕ್ರೀಡಾಕೂಟ ಆಯೋಜಿಸಲಾಗಿತ್ತು.
ರಾಕ್ ಥಂಡರ್ಸ್ ಪಬ್ಲಿಕ್ ವೆಲ್ ಫೇರ್ ಟ್ರಸ್ಟ್ ನ ಅಂಗಸಂಸ್ಥೆ ಹ್ಯೂಮನ್ ರೈಟ್ಸ್ ಪ್ರೊಟೆಕ್ಷನ್ ಕಮಿಟಿ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ 11ಅಂಗನವಾಡಿಗಳ ಸುಮಾರು 150 ಮಕ್ಕಳು ಭಾಗವಹಿಸಿದ್ದರು.ಕ್ರೀಡಾಕೂಟಕ್ಕೆ ಶಾಸಕ ಎಸ್. ಮುನಿರಾಜು ಚಾಲನೆ ನೀಡಿದರು.
ರನ್ನಿಂಗ್ ರೇಸ್,ಲೆಮೆನ್ ಅಂಡ್ ಸ್ಪೂನ್,ಮ್ಯೂಸಿಕಲ್ ಚೇರ್,ಜಂಪಿಂಗ್ ಕ್ರೀಡೆಗಳನ್ನು ಏರ್ಪಡಿಸಲಾಗಿತ್ತು.ಚಿಕ್ಕಬಾಣಾವರದ ಮೂರು ಅಂಗನವಾಡಿ ಮಕ್ಕಳು, ಗಣಪತಿನಗರ,ವೀರಶೆಟ್ಟಿಹಳ್ಳಿ,ಕೆಂಪಾಪುರ ಕಾಲೋನಿ,ಬ್ರದರ್ಸ್ ಕಾಲೋನಿ,ಗುಟ್ಟೆ ಬಸವೇಶ್ವರ ನಗರ, ದ್ವಾರಕನಗರ,ಮಾರುತಿ ನಗರ 1 ಮತ್ತು2 ಅಂಗನವಾಡಿ ಮಕ್ಕಳು ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರತಿಭೆ ಮೆರೆದರು.ಮಕ್ಕಳೊಂದಿಗೆ ಪೋಷಕರು ಸಹ ಹಾಜರಿದ್ದರು.
ಹ್ಯೂಮನ್ ರೈಟ್ಸ್ ಪ್ರೊಟೆಕ್ಷನ್ ಕಮಿಟಿ ರಾಜ್ಯಾಧ್ಯಕ್ಷ ಬಿ.ಎಂ. ಚಿಕ್ಕಣ್ಣ ಮಾತನಾಡಿ,’ಸರ್ಕಾರಿ ಸ್ವಾಮ್ಯದ ಅಂಗನವಾಡಿ ಮಕ್ಕಳಿಗೆ ಕ್ರೀಡಾಕೂಟ ಏರ್ಪಡಿಸುವ ಮೂಲಕ ಮಕ್ಕಳಲ್ಲಿ ಸ್ಪೂರ್ತಿ ಹಾಗೂ ಪ್ರೋತ್ಸಾಹ ನೀಡುವ ಪ್ರಯತ್ನ ಮಾಡಲಾಗಿದೆ’ ಎಂದು ತಿಳಿಸಿದರು.
ಶೆಟ್ಟಿಹಳ್ಳಿ ವಾರ್ಡ್ ಬಿಜೆಪಿ ಅಧ್ಯಕ್ಷ ಬಿ. ಸುರೇಶ್, ಹ್ಯೂಮನ್ ರೈಟ್ಸ್ ಪ್ರೊಟೆಕ್ಷನ್ ಕಮಿಟಿ ರಾಜ್ಯಾಧ್ಯಕ್ಷ ಬಿ.ಎಂ. ಚಿಕ್ಕಣ್ಣ,ಬೆಂಗಳೂರು ನಗರ ಉಪಾಧ್ಯಕ್ಷ ಚಾಂದ್ ಪಾಷ, ಸದಸ್ಯ ಮಹಮದ್ ಸಲೀಂ ಅಹಮದ್,ಮಂಜುನಾಥ್, ಪುರಸಭೆ ಮುಖ್ಯ ಅಧಿಕಾರಿ ಸಂದೀಪ್, ಸೇರಿದಂತೆ ಆಯೋಜಕರ ತಂಡ ನೇತೃತ್ವ ವಹಿಸಿತ್ತು. ದಾಸನಪುರದ ಬಿಜಿಎಸ್ ಗ್ರೂಪ್ ನ ಎಂಸಿಹೆಚ್ ಆಸ್ಪತ್ರೆ ವತಿಯಿಂದ ಅಂಬುಲೆನ್ಸ್ ಹಾಗೂ ವೈದ್ಯ ತಂಡದ ವ್ಯವಸ್ಥೆ ಮಾಡಲಾಗಿತ್ತು.