
ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ: ಚಿಕ್ಕಬಾಣಾವರ ಪುರಸಭೆ ವ್ಯಾಪ್ತಿಯ ಗಣಪತಿ ನಗರದಲ್ಲಿ ಸುಮಾರು 150ಅಂಗನವಾಡಿ ಮಕ್ಕಳಿಗೆ ಕ್ರೀಡಾಕೂಟವನ್ನು ರಾಕ್ ಥಂಡರ್ ಪಬ್ಲಿಕ್ ವೆಲ್ಫೇರ್ ಟ್ರಸ್ಟ್ ಅಂಗಸಂಸ್ಥೆಯಾದ ಹ್ಯೂಮನ್ ರೈಟ್ಸ್ ಪ್ರೊಟೆಕ್ಷನ್ ಕಮಿಟಿ ವತಿಯಿಂದ ಆಯೋಜಿಸಲಾಗಿದ್ದು ಈ ಕ್ರೀಡಾಕೂಟದಲ್ಲಿ ಗೆದ್ದಂತ ಮಕ್ಕಳಿಗೆ ಪ್ರಶಸ್ತಿ ಪತ್ರ ಮತ್ತು ಬಹುಮಾನ ವಿತರಿಸಲಾಯಿತು
ಹಾಗೂ ಅಂಗನವಾಡಿಯ ಎಲ್ಲಾ ಮಕ್ಕಳಿಗೂ ಬಹುಮಾನ ವಿತರಣೆ ಮತ್ತು ಈ ಕ್ರೀಡಾಕೂಟದಲ್ಲಿ ಭಾಗಿಯಾಗಿ ಗೆದ್ದಂತ ಪೋಷಕರಿಗೂ ಪ್ರಶಸ್ತಿ ಪತ್ರ ಮತ್ತು ಬಹುಮಾನ ವಿತರಿಸಲಾಯಿತು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಯಶವಂತಪುರ ಉಪ ವಿಭಾಗದ ಅಸಿಸ್ಟೆಂಟ್ ಕಮಿಷನರ್ ಶ್ರೀಮತಿ ಮೇರಿ ಶೈಲಜಾ, ಯಲಹಂಕ ಶಿಶು ಅಭಿವೃದ್ಧಿ ಇಲಾಖೆಯ ಸಿಡಿಪಿಓ ಶ್ರೀಮತಿ ಶಕುಂತಲಾ, ಯಶವಂತಪುರ 1-ಉಪ ತಹಸಿಲ್ದಾರ್, ವೆಂಕಟೇಶಲು ಪೀಣ್ಯ ಟ್ರಾಫಿಕ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಚಿದಾನಂದಮೂರ್ತಿ ಹ್ಯೂಮನ್ ರೈಸ್ ಪ್ರೊಡಕ್ಷನ್ ಕಮಿಟಿಯ ರಾಜ್ಯಾಧ್ಯಕ್ಷ ಬಿ ಎಂ ಚಿಕ್ಕಣ್ಣ. ಸತ್ಯ ರಂಗಯ್ಯ. ಮೊಹಮ್ಮದ್ ಸಲೀಂ ಅಹಮದ್. ಗ್ಯಾಸ್ ಮಂಜಣ್ಣ. ಶಕೀಲ್ ಅಹಮದ್. ಸಿದ್ದೀಕ್. ಚಿಕ್ಕ ಸ್ವಾಮಿ. ಮುನಿರಾಜು. ರಾಮ್ ಸಿಂಗ್ ಹಾಗೂ ಇತರರು ಭಾಗಿಯಾಗಿದ್ದರು.