
ಹುಬ್ಬಳ್ಳಿ: ಮನೆಗಳನ್ನು ಟಾರ್ಗೆಟ್ ಮಾಡಿಕೊಂಡು ತಮ್ಮ ಕೈ ಚಳಕ ತೋರಿಸಿ ಬೆಲೆ ಬಾಳು ಆಭರಣಗಳನ್ನು ದೋಚಿಕೊಂಡು ಪರಾರಿಯಾಗುತ್ತಿದ್ದ, ನಾಲ್ವರು ಚಾಲಕಿ ಕಳ್ಳರನ್ನು ಹೆಡೆಮುರಿ ಕಟ್ಟುವಲ್ಲಿ ಹುಬ್ಬಳ್ಳಿ ನವನಗರ ಎಪಿಎಂಸಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಾಗಲಕೋಟೆ ನಿವಾಸಿಯಾದ ಸಿದ್ದಪ್ಪಾ ಅಂಬಿಗೇರ 20, ಹುಬ್ಬಳ್ಳಿ ಎಪಿಎಂಸಿ ಈಶ್ವರ ನಗರ ನಿವಾಸಿಗಳಾದ ವಿಷ್ಣು ಅಂಬಿಗೇರ 19, ಕುನಾಲ್‌ಸಿಂಗ್ ಜೋಗಿಂದರ್‌ಸಿಂಗ್ 19 ಹಾಗೂ ನವನಗರ ಬಾಗಲಕೋಟೆ ನಿವಾಸಿ ಅಪ್ರಾಪ್ತ ಬಾಲಕ ಬಂಧಿತ ಆರೋಪಿಗಳಾಗಿದ್ದಾರೆ. ಇನ್ನೂ ಬಂಧಿತ ಆರೋಪಿಗಳು ಮೂರು ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಬಂಧಿತರಿಂದ ಬಂಗಾರ ಹಾಗೂ ಬೆಳೆ ಆಭರಣ ಜತೆಗೆ ಒಂದು ಟಿವಿಎಸ್ ಎನ್‌ಟಾರ್ಕ ದ್ವಿಚಕ್ರ ವಾಹನವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
60ಗ್ರಾಂ ಬಂಗಾರ ಹಾಗೂ 360 ಗ್ರಾಂ ಬೆಳ್ಳಿ ಸೇರಿ ಒಂದು ದ್ವಚಕ್ರ ವಾಹನ ಜತೆಗೆ ಅಂದಾಜು 5 ಲಕ್ಷ 87 ಸಾವಿರ ಮೌಲ್ಯದ ಆಭರ ಸೇರಿ ವಾಹನ ಜಪ್ತಿ ಮಾಡಿದ್ದಾರೆ. ಸದ್ಯ ಓರ್ವ ಅಪ್ರಾಪ್ತ್ ಆರೋಪಿ ಮತ್ತು ಮೂವರು ಆರೋಪಿಗಳನ್ನು ಬಂಧಿಸಿ ವಿಚಾರಣೆ ಪೂರ್ಣಗೊಳ್ಳಿಸಿದ ಹಿನ್ನಲೆಯಲ್ಲಿ, ಆರೋಪಿತರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಕುರಿತು ನವನಗರ ಎಪಿಎಂಸಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.