
ಧಾರವಾಡ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಭಾನುವಾರ ತಡ ರಾತ್ರಿ ಧಾರವಾಡ ಶಹರ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರು ಏರಿಯಾ ಡಾಮಿನೇಷನ್ ನಡೆಸುವ ಮೂಲಕ, ಕಾನೂನು ಉಲ್ಲಂಘಿಸುವವರಿಗೆ ದಂಡಾಸ್ತ್ರ ಪ್ರಯೋಗಿಸಿ ಖಡಕ್ ಎಚ್ಚರಿಕೆ ನೀಡಲಾಯಿತು.
ನಗರದ ವಿವೇಕಾನಂದ ವೃತದಿಂದ ಆರಂಭವಾದ ಶಹರ ಪೊಲೀಸ ಠಾಣೆಯ ಏರಿಯಾ ಡಾಮಿನೇಷನ್ ಠಾಣೆ ವ್ಯಾಪ್ತಿಯ ಹಲವು ಜನನಿಬಿಡ ಪ್ರದೇಶ ಸೇರಿದಂತೆ ಪ್ರಮುಖ ವೃತಗಳುಗೆ ಭೇಟಿ ನೀಡಿತ್ತು. ಈ ವೇಳೆ ಬೈಕ್‌ಗಳಿಗೆ ನಂಬರ್ ಪ್ಲೇಟ್ ಹಾಕದೇ ಹಾಗೂ ಮದ್ಯಪಾನ, ದೂಮಪಾನ ಸೇರಿ ಲೇಟ್ ನೈಟ್ ಹರಟೆ ಹೊಡೆಯುವ ಪುಡಾರಿಗಳನ್ನು ಠಾಣೆಗೆ ಕರೆದುಕೊಂಡು ಬಂದು ಕಾನೂನು ಬಿಸಿ ಮುಟ್ಟಿಸಲಾಯಿತ್ತು.
ಧಾರವಾಡ ಎಸಿಪಿ ನೇತೃತ್ವದಲ್ಲಿ ಏರಿಯಾ ಡಾಮಿನೇಷನ್ ನಡೆಸಲಾಗಿದ್ದು, ಹಲವು ಬೈಕ ಸವಾರರಿಗೆ ಎಸಿಪಿ ಪ್ರಶಾತ್ ಸಿದ್ಧಗೌಡರವರು ಚಳಿ ಬೀಡಿಸಿದರು. ಏರಿಯಾ ಡಾಮನೇಷನ್ ವೇಳೆ 44 ಬೈಕ್, 90ಕ್ಕೂ ಅಧಿಕ ಪುಡಾರಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು. ಠಾಣೆಗೆ ಕರೆ ತಂದು ಎಲ್ಲರಿಗೂ ಕಾನೂನಿನ ಪಾಠ ಮಾಡಿ ಕಾನೂನು ಉಲ್ಲಂಘಿಸಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿ ದಂಡಾಸ್ತ್ರ ಪಯೋಗಿಸಿ ಖಡಕ್ ಎಚ್ಚರಿಕೆ ನೀಡಲಾಯಿತು. ಈ ಸಂದರ್ಭದಲ್ಲಿ ಶಹರ ಪೊಲೀಸ ಠಾಣೆಯ ಸಿಪಿಐ ನಾಗೇಶ್ ಕಾಡದೇವರ ಮಠ ಸೇರಿ ಪಿಎಸ್‌ಐ ಹಾಗೂ ಎಎಸ್‌ಐ ಮತ್ತು ಸಿಬ್ಬಂದಿಯವರು ಉಪಸ್ಥಿತರಿದ್ದರು.